ರಾಜ್ಯ

ಲಂಡನ್ ನಿಂದ ಆಗಮಿಸಿದ್ದ 3 ವರ್ಷದ ಮಗುವಿಗೆ ಕೊರೋನಾ ಶಂಕೆ: ಮುಂದುವರೆದ ಚಿಕಿತ್ಸೆ

Srinivasamurthy VN

ಗದಗ: ಮಾರಣಾಂತಿಕ ಕೊರೋನಾ ವೈರಸ್ ನಿಯಂತ್ರಣ ಕ್ರಮಗಳು ಮುಂದುವರೆದಿದ್ದು, ಲಂಡನ್ ನಿಂದ ಆಗಮಿಸಿದ್ದ ಮೂರು ವರ್ಷದ ಮಗುವಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 60 ಜನರ ಮೇಲೆ ನಿಗಾ ಇಡಲಾಗಿದ್ದು, ಈ ಪೈಕಿ ಇಂದು ಮತ್ತೆ 6 ಜನ ಸೇರ್ಪಡೆಯಾಗಿದ್ದಾರೆ. ಹೊಸ ಶಂಕಿತರ ಪೈಕಿ ಐವರಿಗೆ ಮನೆಯಲ್ಲಿ ನಿಗಾ ಜತೆಗೆ ಚಿಕಿತ್ಸೆ ನೀಡಲಾಗುತ್ತಿದೆ. 
ಇದರಲ್ಲಿ ಲಂಡನ್ ನಿಂದ ಆಗಮಿಸಿದ ಕುಟುಂಬದ ಮೂರು ವರ್ಷದ ಮಗುವನ್ನು ಗದಗ ವೈಧ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶಂಕೆಯ ಮೇರೆಗೆ ದಾಖಲಿಸಲಾಗಿದೆ. ಮಗುವಿನ ಪರೀಕ್ಷೆಗಾಗಿ ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. 

ಈಗಾಗಲೇ ಜಿಲ್ಲೆಯಲ್ಲಿ 9 ಜನ ಶಂಕಿತರಲ್ಲಿ 7 ಮಂದಿಗೆ ಸೋಂಕು ವ್ಯಾಪಿಸಿಲ್ಲ ಎಂಬ ವರದಿ ಬಂದಿದ್ದು ಇನ್ನು 2 ಪ್ರಕರಣಗಳ ವರದಿಗಳು ಬರಲು ಬಾಕಿ ಇದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

SCROLL FOR NEXT