ರಾಜ್ಯ

ನನ್ನ ಮಗಳು ಇಟಲಿಯಲ್ಲಿದ್ದು, ರಕ್ಷಣೆ ಮಾಡಿ: ಸಚಿವ ಆನಂದ್ ಸಿಂಗ್

Manjula VN

ಬೆಂಗಳೂರು: ಕೊರೋನಾ ವೈರಸ್ ಪೀಡಿತ ಇಟಲಿಯಲ್ಲಿ ನನ್ನ ಮಗಳು ಸಿಲುಕಿಕೊಂಡಿದ್ದು, ರಕ್ಷಣೆ ಮಾಡುವಂತೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ನನ್ನ ಮಗಳು ಇಟಲಿಯ ರೋಮ್ ವಿಮಾನ ನಿಲ್ದಾಣದಲ್ಲಿ ನನ್ನ ಮಗಳು ಸೇರಿ 70 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಒಂದು ವಾರದಿಂದ ವಿಮಾನ ನಿಲ್ದಾಣದಲ್ಲಿಯೇ ಇದ್ದಾರೆ. ಊಟ-ವಸತಿಗೆ ಸಮಸ್ಯೆಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಇಂದು ಅಥವಾ ನಾಳೆ ಸರಿ ಹೋಗಬಹುದು ಎಂಬ ವಿಶ್ವಾಸವಿದೆ. ಅವರು ವಿಮಾನ ನಿಲ್ದಾಣದಲ್ಲಿಯೇ ಬಂದಿಯಾಗಿ ಈಗಾಗಲೇ ಒಂದು ವಾರ ಕಳೆದಿದೆ. ಮುಂದಿನ ಎರಡು ಅಥವಾ 3 ದಿನಗಳಲ್ಲಿ ಎಲ್ಲಾ ಸರಿಹೋಗಬಹುದು. ಕಾದು ನೋಡಬೇಕಿದೆ. 

ಮಗಳು ಉನ್ನತ ವ್ಯಾಸಾಂಗಕ್ಕಾಗಿ ಅಲ್ಲಿಗೆ ತೆರಳಿದ್ದಾಳೆ. ವಿಮಾನದಲ್ಲಿ ಕುಳಿತವರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಒಂದು ವಾರದಿಂದ ವಿಮಾನ ನಿಲ್ದಾಣದಲ್ಲಿಯೇ ಕಾಳ ಕಳೆಯುವಂತಾಗಿದೆ. ಅಲ್ಲಿ ಊಟ ಮತ್ತು ವಸತಿಗೆ ಸಮಸ್ಯೆಯಾಗಿದೆ. ಕೆಲವು ವಿದ್ಯಾರ್ಥಿಗಳು ಹಣವಿಲ್ಲದೇ ಪರದಾಡುವಂತಾಗಿದೆ. ಭಾರತ ಸರ್ಕಾರದ ಪ್ರಮಾಣಪತ್ರ ತೆಗೆದುಕೊಂಡು ಬನ್ನಿ ಎಂದು ಹೇಳಿರುವ ಕಾರಣ ಅಲ್ಲಿಯೇ ಉಳಿಯಬೇಕಾಗಿದೆ. ಅಲ್ಲಿ ಸಿಬ್ಬಂದಿ ಕೊರತೆ ಕಾರಣ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನಿಮ್ಮ ರಾಯಭಾರಿ ಕಚೇರಿ ಬಳಿ ಮಾತನಾಡಿ ಎಂದೂ ಹೇಳುತ್ತಿದ್ದಾರೆ ಎಂದು ವಿವರಿಸಿದರು. ಹಣದ ಕೊರತೆ ಉಂಟಾಗಿರುವುದರಿಂದ ಅಲ್ಲಿರುವ ಕೆಲವು ಭಾರತೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆಂದು ತಿಳಿಸಿದ್ದಾರೆ. 

SCROLL FOR NEXT