ರಾಜ್ಯ

ಸಾಹಿತಿ ಭೈರಪ್ಪ, ಸಾಲು ಮರದ ತಿಮ್ಮಕ್ಕ ಸೇರಿದಂತೆ ಐವರು ಸಾಧಕರಿಗೆ ಗೌರವ ಡಾಕ್ಟರೇಟ್

Shilpa D

ಕಲಬುರಗಿ:  ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ, ಇಸ್ರೋ ಚೇರ್ಮನ್ ಕೆ. ಶಿವನ್, ಸಾಲು ಮರದ ತಿಮ್ಮಕ್ಕ, ಕವಿ ಡಾ. ಚನ್ನವೀರ ಕಣವಿ, ಜಾನಪದ ಸಾಹಿತಿ ಡಾ. ಎಂ. ಜಿ. ಬಿರಾದಾರ್ ಅವರನ್ನು ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

ಅಸಾಮಾನ್ಯ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ಸಲ್ಲಿಸಿದ ಪ್ರಸ್ತಾವನೆಯನ್ನು ಭಾರತದ ಘನವೆತ್ತ ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಅನುಮೋದನಾ ಪತ್ರವು ಮಾರ್ಚ್ 18 ರಂದು ವಿಶ್ವವಿದ್ಯಾನಿಲಯ ತಲುಪಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್. ಎಂ. ಮಹೇಶ್ವರಯ್ಯಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿ ತನ್ನ  ಮುಂಬರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ವಿಶ್ವವಿದ್ಯಾಲಯವು ಶಿಫಾರಸ್ಸು ಮಾಡಿದ ಹೆಸರುಗಳಲ್ಲಿ  ಸಾಧಕರಾದ ಡಾ.ಎಂ.ಜಿ.ಬಿರಾದಾರ, ಡಾ.ಎಸ್.ಎಲ್.ಭೈರಪ್ಪ, ಡಾ.ಚೆನ್ನವೀರಕಣವಿ, ಸಾಲುಮರದತಿಮ್ಮಕ್ಕ, ಕೆ.ಶಿವನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅನುಮೋದನೆ ನೀಡಿದ್ದಾರೆ.
 

SCROLL FOR NEXT