ರಾಜ್ಯ

ಹಣಕಾಸು ವಿವಾದ: ಲಿಂಗಪರಿವರ್ತಿತ ವ್ಯಕ್ತಿಯನ್ನು ಕೊಂದ ಇಬ್ಬರ ಬಂಧನ

Raghavendra Adiga

ಬೆಂಗಳುರು: ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ಲಿಂಗಪರಿವರ್ತನೆಯಾದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಸುಬ್ರಮಣ್ಯಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಚಿಕ್ಕಗೌಡನಪಾಳ್ಯ ನಿವಾಸಿಗಳಾಗಿರುವ  ಅರುಣ್ ಕುಮಾರ್ ಅಲಿಯಾಸ್ ಅರುಣಾ (27) ಮತ್ತು ಶ್ರೀನಾಥ್ ಅಲಿಯಾಸ್ ಶಿವು (30) ಬಂಧಿತರು. ಆರೋಪಿಗಳು ವಿಜಯ್ ಅಲಿಯಾಸ್ ವಿಜಿ (28) ಅವರನ್ನು ಮಂಗಳವಾರ ಇರಿದು ಕೊಲೆ ಮಾಡಿದ್ದರು ಎಂದು ಪೋಲೀಸರು ಹೇಳಿದ್ದಾರೆ.

ಅರುಣ್ ಅನು ಎಂಬ ಲಿಂಗಪರಿವರ್ತಿತ ಮಹಿಳೆಯನ್ನು ವಿವಾಹವಾಗಿದ್ದನು, ಮತ್ತು ಅವರು ಇನ್ನೂ ಐವರು ಲಿಂಗಪರಿವರ್ತೆನೆಯಾಗಿರುವ ವ್ಯಕ್ತಿಗಳೊಡನೆ ವಾಸವಿದ್ದರು.ಮಂಗಳವಾರ  ಸಂಜೆ 5 ಗಂಟೆಗೆ ಅದೇ ಕಟ್ಟಡದಲ್ಲಿ ವಾಸವಾಗಿದ್ದ ಮನೆಯ ಮಾಲೀಕರು ಅರುಣ್, ಅನು ಮತ್ತು ವಿಜಿ ಜಗಳವಾಡುವುದನ್ನು ಕೇಳಿಸಿಕೊಂಡಿದ್ದಾರೆ. ಅವರು ಆ ಜಗಳವೇನೆಂದು ನೋಡಲು ಹೋದಾಗ ಅರುಣ್ ವಿಜಿಗೆ ಚಾಕುವಿನಿಂದ ಇರಿದಿದ್ದು ಇತರರು ವಿಜಿಯನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದರು,  ಆದರೆ ವಿಜಿ ಆಸ್ಪತ್ರೆ ಮಾರ್ಗದ ನಡುವೆಯೇ ಸಾವನ್ನಪ್ಪಿದ್ದಾಳೆ.

“ಅರುಣ್ ಮತ್ತು ಅವನ ಸ್ನೇಹಿತ ಶಿವು ಕುಮಾರಸ್ವಾಮಿ ಲೇಔಟ್ ಲವ ಕುಶ ಪಾರ್ಕ್  ಬಳಿ ಖಾಲಿ ಜಾಗದಲ್ಲಿ ಶವ ಎಸೆದು ಪರಾರಿಯಾಗಿದ್ದಾರೆ. ಮನೆ ಮಾಲೀಕರ ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ತಂಡಗಳು ಆರೋಪಿ ಇರುವ ಸ್ಥಳದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ಸಂಗ್ರಹಿಸಿದ ನಂತರ ಅವರನ್ನು ಬಂಧಿಸಲಾಗಿದೆ. "ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಅರುಣ್, ವಿಜಿನಿಂದ ಸ್ವಲ್ಪ ಹಣವನ್ನು ಸಾಲ ಪಡೆದಿದ್ದನು ಅದನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸಲು ನಿರಾಕರಿಸಿದ್ದೇ ಈ ಕೊಲೆಗೆ ಕಾರಣ  ಎಂದು ತಿಳಿದುಬಂದಿದೆ. 
 

SCROLL FOR NEXT