ರಾಜ್ಯ

ಕೊರೋನಾ ಹೋರಾಟಕ್ಕೆ ಸಿದ್ಧ: 5000 ಐಸಿಯು ಬೆಡ್, 500 ಹೊಸ ವೆಂಟಿಲೇಟರ್ ಖರೀದಿಸಿದ ಸರ್ಕಾರ

Manjula VN

ಬೆಂಗಳೂರು: ದೇಶ ಹಾಗೂ ವಿದೇಶದಲ್ಲಿ ಮರಣ ಮೃದಂಗ ಸಾರುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧಗೊಂಡಿದೆ. ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಆಸ್ಪತ್ರೆಗಲಲ್ಲಿ ಈಗಾಗಲೇ 5000 ಐಸಿಯು ಬೆಡ್ ಗಳನ್ನು ಸಿದ್ಧಪಡಿಸಲಾಗಿದ್ದು, 500 ಹೊಸ ವೆಂಟಿಲೇಟರ್ ಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ. 

ವೈರಸ್ ವಿರುದ್ಧ ಹೋರಾಡಲು ವೆಂಟಿಲೇಟರ್ ಗಳು ಅತ್ಯಂತ ಅವಶ್ಯಕವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇವುಗಳ ಕೊರತೆ ಎದ್ದು ಕಾಣುತ್ತಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಲ್ಲಿ ಶ್ವಾಸಕೋಷದ ಸೋಂಕು ಹಾಗೂ ನ್ಯುಮೋನಿಯಾ ದಂತಹ ರೋಗಗಳು ಹೆಚ್ಚಾಗುತ್ತಿದ್ದು,  ಸೋಂಕುಗಳಿಗೆ ಸೂಕ್ತ ಸಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 500 ವೆಂಟಿಲೇಟರ್ ಗಳ ಖರೀದಿ ಮತ್ತು 5000 ಆಕ್ಸಿಜನ್ ಸೌಲಭ್ಯ ಇರುವ ಹಾಸಿಗಗಳ ಸೌಲಭ್ಯ ಸೃಷ್ಟಿಸಲು ಕ್ರಮ ಕೈಗೊಂಡಿದೆ. 

ಕಲಬುರಗಿ, ಬಳ್ಳಾರಿಯಲ್ಲಿ ರೀಜೆಂಟ್ ಗಳ ಅಗತ್ಯವಿದೆ. ಹುಬ್ಬಳ್ಳಿ, ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿದ್ದು, ಸಮ್ಮತಿ ನೀಡಿದ್ದಾರೆ. ಕೊರೋನಾ ವೈರಸ್ಸನ್ನು ಗಂಭೀರವಾಗಿ ಪರಿಗಣಿಸಿ ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಅಲ್ಲದೆ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಗತ್ಯವಿದ್ದರೆ, ಒತ್ತಡ ಹೇರಬಹುದು ಎಂದು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ. 

SCROLL FOR NEXT