ರಾಜ್ಯ

ವೆಬ್ ಸಿರೀಸ್ ನಿಂದ ಹುಲಿಗಳ ಸಾವಿನ ನಿಗೂಢತೆ ಕಂಡುಹಿಡಿದ ಬೆಂಗಳೂರು ಲ್ಯಾಬ್ ನ ತಜ್ಞರು

Sumana Upadhyaya

ಬೆಂಗಳೂರು: ಫಾರೆನ್ಸಿಕ್ ಫೈಲ್ಸ್ ವೆಬ್ ಸರಣಿಯಿಂದ ಪ್ರೇರೇಪಿತಗೊಂಡು ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಕರ್ನಾಟಕ ಗಡಿಯ ಗೋವಾದ ಮದೈ ವನ್ಯಜೀವಿ ಅಭಯಾರಣ್ಯದಲ್ಲಿ ನಾಲ್ಕು ಹುಲಿಗಳ ಸಾವಿನ ನಿಗೂಢತೆಯನ್ನು ಬೇಧಿಸಿದ್ದಾರೆ.


ಇದೇ ಮೊದಲ ಬಾರಿಗೆ ಅಮೆರಿಕಾದಿಂದ ಆಮದು ಮಾಡಿಕೊಂಡಿರುವ ಎಲಿಸಾ ಕಿಟ್ ಬಳಸಿ ಹೆಚ್ಚು ಕೊಳೆತ ಹುಲಿ ಮಾದರಿಗಳನ್ನು ವಿಶ್ಲೇಷಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಹುಲಿಗಳನ್ನು ಸಾಯಿಸುವುದು, ಅಸಹಜ ಸಾವು, ಬೇಟೆಗಾರರು ಮತ್ತು ಅಪರಾಧಿಗಳನ್ನು ಬಹಳ ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.


ಹುಲಿಗಳಿಗೆ ಸ್ಥಳೀಯರು ಪೈರೆಥ್ರಾಯ್ಡ್ ಗುಂಪಿನ ರಾಸಾಯನಿಕದ ವಿಷ ಬೆರೆಸಿ ಸಾಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದುವರೆಗೆ ಅರಣ್ಯಾಧಿಕಾರಿಗಳು ಇದನ್ನು ಸಹಜ ಸಾವು ಅಥವಾ ಹುಲಿಗಳ ಹೋರಾಟದಿಂದ ಗಾಯವಾಗಿ ಸತ್ತಿರಬಹುದು ಎಂದೇ ವರದಿ ನೀಡುತ್ತಿದ್ದರು.


ಗೋವಾ ಅರಣ್ಯ ಇಲಾಖೆ ಅಧಿಕಾರಿಗಳು ಗೋವಾ, ಬೆಂಗಳೂರು ಮತ್ತು ಬರೈಲ್ಲಿ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸುತ್ತಿದ್ದರು. ಬೆಂಗಳೂರು ಪ್ರಯೋಗಾಲಯದ ತಜ್ಞರು ಸಾವಿಗೆ ನಿಖರ ಕಾರಣ ಕಂಡುಹಿಡಿದಿದ್ದಾರೆ.

SCROLL FOR NEXT