ರಾಜ್ಯ

ವಿದೇಶಗಳಿಂದ ಬರುವ ನಾಗರಿಕರು ಸ್ವ ನಿರ್ಬಂಧ ಹಾಕಿ ಮನೆಯಲ್ಲಿ ಉಳಿಯದಿದ್ದರೆ ಕ್ರಿಮಿನಲ್ ಕೇಸು: ರಾಜ್ಯ ಸರ್ಕಾರ

Sumana Upadhyaya

ಬೆಂಗಳೂರು: ವಿದೇಶಗಳಿಂದ ಬಂದ ನಾಗರಿಕರಿಂದ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅಂತವರನ್ನು ತೀವ್ರ ತಪಾಸಣೆಗೆ ಒಳಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ. 


ಇಂದು ಜನತಾ ಕರ್ಫ್ಯೂ ಆಚರಣೆ ಮಧ್ಯೆ ಬೆಂಗಳೂರು ಪೊಲೀಸ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸುಮಾರು 500 ಸದಸ್ಯರ ತಂಡ ಕಳೆದ ಕೆಲ ದಿನಗಳಿಂದ ವಿದೇಶಗಳಿಂದ ಬಂದ ಸುಮಾರು 30 ಸಾವಿರ ನಾಗರಿಕರ ಮನೆಗಳಿಗೆ ತೆರಳಿ ಅವರು ಸ್ವಯಂ ನಿರ್ಬಂಧವನ್ನು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂದು ಪರೀಕ್ಷೆ ಮಾಡಲಿದ್ದಾರೆ.ಕೊರೋನಾ ವೈರಸ್ ಸೋಂಕಿನ ಗಂಭೀರತೆಯನ್ನು ಅರ್ಥಮಾಡಿಕೊಂಡು ಪಾಲಿಸದಿದ್ದವರಿಗೆ ಹ್ಯಾಂಡ್ ಸ್ಟ್ಯಾಂಪಿಂಗ್ ಮತ್ತು ನೊಟೀಸ್ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.


ವಿದೇಶಗಳಿಂದ ಬಂದ ನಾಗರಿಕರು ಮನೆಯಲ್ಲಿಯೇ ಸ್ವಯಂ ನಿರ್ಬಂಧ ಹಾಕಿಕೊಂಡು ಉಳಿಯದಿದ್ದರೆ ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ಕಾಯ್ದೆಯಡಿ ಕ್ರಿಮಿನಲ್ ಕೇಸು ಹಾಕಲಾಗುವುದು ಎಂದು ಸಹ ಇಲಾಖೆ ಎಚ್ಚರಿಕೆ ನೀಡಿದೆ. 

SCROLL FOR NEXT