ರಾಜ್ಯ

ಇಂದು 6 ಹೊಸ ಪ್ರಕರಣ ಪತ್ತೆ: ಕೊರೋನಾ ಭೀತಿಗೆ ಮಾ.31ರವರೆಗೆ ರಾಜ್ಯ ಪೂರ್ಣ ಸ್ತಬ್ದ, ಯುಗಾದಿ ಸಡಗರಕ್ಕೂ ತಣ್ಣೀರು!

Vishwanath S

ಬೆಂಗಳೂರು: ಕೊರೋನಾ ತಡೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ವಿನಿಂದಾಗಿ ರಾಜ್ಯದಲ್ಲಿ ಜನಜೀವನ ಸಂಪೂರ್ಣ ಸ್ತಬ್ದವಾಗಿದ್ದು ಕೊರೋನಾ ವಿರುದ್ಧದ ಹೋರಾಟಕ್ಕೆ ರಾಜ್ಯದ ಜನತೆ ಸ್ವಯಂ ಇಚ್ಚೆಯಿಂದಲೇ ಸಾಥ್ ನೀಡಿದ್ದಾರೆ. 

ಜನತಾ ಕರ್ಫ್ಯೂ ಮುಗಿಯುತ್ತಿದ್ದಂತೆ ನಂತರ ರಾಜ್ಯ ಸರ್ಕಾರ ಪ್ರತಿಬಂಧಕಾಜ್ಞೆ ಮಧ್ಯರಾತ್ರಿಯವರೆಗೆ ಮುಂದುವರೆಯಲಿದ್ದು ಜನತೆ ಇನ್ನು ಕೆಲವು ದಿನ ಅಘೋಷಿತ ಬಂದ್ ಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕಿದೆ. 

ರಾಜ್ಯದಲ್ಲೂ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಮುನ್ನೆಚ್ಚರಿಕೆಯಾಗಿ ನಾಳೆಯೂ ಬಂದ್ ಮುಂದುವರೆಯಲಿದೆ. ಸಾರ್ವಜನಿಕ ಸಾರಿಗೆ, ಯಾವುದೇ ವಾಣಿಜ್ಯ ವಹಿವಾಟು ಇರುವುದಿಲ್ಲ.

ಸೋಂಕು ಕಂಡು ಬಂದಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಕೊಡಗು, ಕಲಬುರ್ಗಿ,  ಬೆಳಗಾವಿ, ಮಂಗಳೂರು ಜಿಲ್ಲೆಗಳನ್ನು ಲಾಕ್ ಔಟ್ ಮಾಡಲಾಗುತ್ತಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಾಳೆಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದುಗೊಳಿಸಲಾಗಿದೆ. ಎಸಿ ಬಸ್ ಸೇವೆ, ಮೆಟ್ರೋ ಸೇವೆ ಮಾರ್ಚ್ 31ರವರೆಗೆ ಇರುವುದಿಲ್ಲ, ಈ 9 ಜಿಲ್ಲೆಗಳಲ್ಲಿ ಕಾರ್ಮಿಕರು ಹೆಚ್ಚಿರುವ ಕೈಗಾರಿಗೆಗಳಲ್ಲಿ ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಬೇಕು, ಇಂದು ರಾತ್ರಿ 9 ಗಂಟೆಗೆ ಜನತಾ ಕರ್ಫೂ ಮುಗಿಯಲಿದೆ. ಆದರೆ, ರಾತ್ರಿ 9 ಗಂಟೆಯಿಂದ 12 ಗಂಟೆಯವರೆಗೂ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

SCROLL FOR NEXT