ರಾಜ್ಯ

4 ಕೃಷಿ ವಿಶ್ವವಿದ್ಯಾಲಯಗಳ ಬೋಧಕ, ಬೋಧಕೇತರ ಸಿಬ್ಬಂದಿಗೆ ವೇತನ ಸಹಿತ ರಜೆ: ಬಿ.ಸಿ. ಪಾಟೀಲ್ 

Nagaraja AB

ಬೆಂಗಳೂರು: ಕೊರೋನಾವೈರಸ್ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ 4 ಕೃಷಿ ವಿಶ್ವವಿದ್ಯಾಲಯಗಳ ಬೋಧಕ, ಬೋಧಕೇತರ  ಹಾಗೂ ಗುತ್ತಿಗೆ ಆಧಾರಿತ  ಸಿಬ್ಬಂದಿಗಳಿಗೆ ಮಾರ್ಚ್ 31ರವರೆಗೆ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಆದೇಶದ ಅನ್ವಯ ರಾಜ್ಯದ ಬೆಂಗಳೂರು,  ಧಾರವಾಡ, ರಾಯಚೂರು ಹಾಗೂ  ಶಿವಮೊಗ್ಗದಲ್ಲಿರುವ  ನಾಲ್ಕು ವಿಶ್ವವಿದ್ಯಾಲಯಗಳ  ಬೋಧಕ, ಬೋಧಕೇತರ  ಹಾಗೂ ಗುತ್ತಿಗೆ ಆಧಾರಿತ  ಸಿಬ್ಬಂದಿಗಳಿಗೆ  ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ ಎಂದು  ಕೃಷಿ ಸಚಿವ ಬಿ. ಸಿ. ಪಾಟೀಲ್ ತಿಳಿಸಿದ್ದಾರೆ.

ರಜೆ ಸಮಯದಲ್ಲಿ ಸಂಶೋಧನೆಗೆ ಸಂಬಂಧಿಸಿದ ಅಧ್ಯಯನದ ಪಠ್ಯಕ್ರಮವನ್ನು ಅನ್ ಲೈನ್ ಮೂಲಕ ಅಭಿವೃದ್ಧಿ ಪಡಿಸುವುದು, ತದನಂತರ ಕಾಲೇಜು ನೂತನ ಶೈಕ್ಷಣಿಕ ಅಧ್ಯಯನದ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದು, ಸಂಶೋಧನೆಯ ಪತ್ರಗಳು ಹಾಗೂ ಲೇಖನ ಬರೆಯುವುದು ಹಾಗೂ ಪ್ರಕಟಿಸುವುದು, ರಜೆ ಮೇಲೆ ತೆರಳುವ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ದೂರವಾಣಿ ಹಾಗೂ ಇ- ಮೇಲ್  ವಿಳಾಸವನ್ನು  ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಸಚಿವರಿಗೆ ಕಡ್ಡಾಯವಾಗಿ ನೀಡಬೇಕು ಎಂದು ಬಿಸಿ ಪಾಟೀಲ್ ಸೂಚಿಸಿದ್ದಾರೆ.

SCROLL FOR NEXT