ರಾಜ್ಯ

ಹೊಸಪೇಟೆ: ಅಂತರಾಜ್ಯ ಕಳ್ಳರಿಗೆ ಹೆಡೆಮುರಿ ಕಟ್ಟಿದ ಪೊಲೀಸರು, 71 ಲಕ್ಷ ಮೌಲ್ಯದ ಚಿನ್ನಾಭರಣ ವಶ!

Vishwanath S

ಹೊಸಪೇಟೆ: ಕಳೆದ ಐದು ವರ್ಷಗಳ ಅವಧಿಯಲ್ಲಿ ಹೊಸಪೇಟೆ ನಗರ ಸೇರಿದಂತೆ ಬಳ್ಳಾರಿ ಜಿಲ್ಲೆಯ ಕೆಲವೆಡೆ ನಡೆದ ಒಟ್ಟು 17 ಕಳ್ಳತನ ಪ್ರಕರಣಗಳನ್ನು ಬೇದಿಸಿರುವ ಪೊಲೀಸರು ಅಂತರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಹೊಸಪೇಟೆ ಉಪವಿಭಾಗದ ಡಿವೈಎಸ್ಪಿ ರಘು ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂರು ಜನ ಕುಖ್ಯಾತ ಕಳ್ಳರನ್ನು ಬಂಧಿಸಲಾಗಿದೆ. ಇನ್ನು ಬಂಧಿತರಿಂದ 1.680 ಕೆಜಿ ಚಿನ್ನ ಹಾಗೂ 15.33 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 71.09 ಲಕ್ಷ ಮೌಲ್ಯದ ಬೆಳ್ಳಿ, ಚಿನ್ನಾಭರಣ ವಶ ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಔರಂಗಬಾದ್‌ ಜಿಲ್ಲೆಯ ಗಂಗಾಪುರ ತಾಲೂಕಿನ ಪಕೋರ ಗ್ರಾಮದ ಭೀಮಕಾಳೆ(27), ಹಾಗೂ ಅದೇ ತಾಲೂಕಿನ ವಜರ್‌ ನಿವಾಸಿ ಕಮಲಾಕರ್‌ ಪಿಂಪಳೆ(38) ಮತ್ತು ಮತ್ತೊಂದು ಪತ್ಯೇಕ ಪ್ರಕರಣದ ಆರೋಪಿ ಹೊಸಪೇಟೆ ನಿವಾಸಿ ಹನುಮಂತಪ್ಪ(37) ಬಂಧಿತ ಆರೋಪಿಗಳು.

2015ರಿಂದ ಇಲ್ಲಿಯವರೆಗೆ  ಹೊಸಪೇಟೆ ಬಡಾವಣೆ ಠಾಣೆಯಲ್ಲಿ- 2, ಹೊಸಪೇಟೆ ಪಟ್ಟಣ ಠಾಣೆಯ - 6, ಚಿತ್ತವಾಡಗಿ - 2, ಹೊಸಪೇಟೆ ಗ್ರಾಮೀಣ - 2, ಕಮಲಾಪುರ - 1, ಕೌಲ್‌ಬಜಾರ್‌ -1, ಗಾಂಧಿನಗರ ಠಾಣೆಗಳಲ್ಲಿ - 3 ಪ್ರಕರಣ ಸೇರಿದಂತೆ ಒಟ್ಟು ಒಟ್ಟು 17 ಪ್ರಕರಣಗಳಲ್ಲಿ ಬೇಕಾಗಿದ್ದ ಖದೀಮರು.

ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಬಳ್ಳಾರಿ ಎಸ್ಪಿ ಸಿ‌ಕೆ. ಬಾಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

SCROLL FOR NEXT