ರಾಜ್ಯ

ರಾಷ್ಟ್ರೀಯ ಹೆದ್ದಾರಿ -206 ಅಗಲೀಕರಣ ನೆಪ: 3,368 ಮರಗಳಿಗೆ ಕುತ್ತು!

Raghavendra Adiga

ಬೆಂಗಳೂರು: ರಾಜ್ಯ ಕೊರೋನಾವೈರಸ್ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಈ ಸಮಯದಲ್ಲಿ ಭದ್ರಾವತಿಯ ಅರಣ್ಯ ವಿಭಾಗದ ತಾಕಿಕೆರೆ  ಹಾಗೂ ಉಂಬಳೆಬೈಲು  ನಡುವೆ ಎನ್ಎಚ್ -206  ವ್ಯಾಪ್ತಿಯಲ್ಲಿ  3,368 ಮರಗಳನ್ನು ಕಡಿಯುವ ಸನಿರ್ಧಾರವನ್ನು ಸರ್ಕಾರ ಸದ್ದಿಲ್ಲದೆ  ಕೈಗೊಂಡಿದೆ. ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಇಐಎ) ಅಧ್ಯಯನಗಳನ್ನು ನಡೆಸದೆ ಅಥವಾ ಅಗತ್ಯ ಉದ್ದೇಶವನ್ನು ಸಹ ಗಮನಿಸದೆ  ಸರ್ಕಾರವು ಯೋಜನೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಪರಿಸರ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಶಿವಮೊಗ್ಗ ನಗರವು ರಿಂಗ್ ರೋಡ್ ಯೋಜನೆ ಮತ್ತು ತೀರ್ಥಹಳ್ಳಿ-ಅಗುಂಬೆ ರಸ್ತೆ ಅಗಲೀಕರಣಕ್ಕಾಗಿ ತನ್ನ ಎಲ್ಲಾ ಹಸಿರನ್ನು ಕಳೆದುಕೊಂಡಿದ್ದು , ಈಗ ಸ್ಥಳೀಯ ವಿವಿಧ ಹಣ್ಣುಗಳ ಮರಗಳಿರುವ ವ 3,386 ಮರಗಳನ್ನು ಕಳೆದುಕೊಳ್ಳುವ ಬಗೆಗೆ ಆಘಾತಕಾರಿ ಮಾಹಿತಿ ಹೊರಬಂದಿದೆ. ಈ ಮರಗಳಲ್ಲಿ ಹೆಚ್ಚಿನವು 100 ವರ್ಷಗಳಿಗಿಂತಲೂ ಹಳೆಯವು ಮತ್ತು ವಿವಿಧ ರೀತಿಯ ಪಕ್ಷಿಗಳು, ಸಸ್ತನಿಗಳು ಮತ್ತು ಇತರ ಜಾತಿ ಪ್ರಾಣಿಗಳಿಗೆ ವಾಸಸ್ಥಾನವಾಗಿದೆ.

ಎನ್‌ಎಚ್ -206 (ತುಮಕುರು-ಶಿವಮೊಗ್ಗ ರಸ್ತೆ) ದಲ್ಲಿ 166 ಕಿ.ಮೀ ವಿಸ್ತಾರದಲ್ಲಿ ಹರಡಿರುವ ಮರಗಳು ಮತ್ತು ತರಿಕೆರೆ, ಲಕ್ಕವಳ್ಳಿ, ಭದ್ರಾವತಿ,ಉಂಬಳಬೈಲು ಣಿಯ ಬಯಲು ಪ್ರದೇಶಗಳಲ್ಲಿರುವ ಮರಗಳಿಗೆ ಈಗ ಕಂಟಕ ಎದುರಾಗಿದೆ.. ಮಾರ್ಚ್ 11 ರಂದು ಭದ್ರಾವತಿ ವಿಭಾಗದ  ಡಿಸಿಎಫ್ ಸಾರ್ವಜನಿಕರಿಂದ ಸಲಹೆಗಳನ್ನು15 ದಿನಗಳಲ್ಲಿ ಪಡೆಯಬೇಕಿದೆ.

3,386 ಮರಗಳನ್ನು ಕಡಿಯುವುದಕ್ಕೆ ಪರಿಸರ  ಹೋರಾಟಗಾರರು , ನಾಗರಿಕರು ಮತ್ತು ಕಾರ್ಯಕರ್ತರು ಆಕ್ಷೇಪಣೆ ಸಲ್ಲಿಸಿದ್ದಾರೆ.“2018 ಮತ್ತು 2019 ರಲ್ಲಿ 157 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ರಾಜ್ಯವು ಬರಪೀಡಿತವಾಗಿರುವುದನ್ನು ಸರ್ಕಾರ ಅಸಡ್ಡೆ ಮಾಡಿದೆ.  ಮಾಲೆನಾಡಿನ ವಿಸ್ತಾರವಾದ ಪ್ರದೇಶಗಳಲ್ಲಿ ರಸ್ತೆ ಅಗಲೀಕರಣ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ವಿಸ್ತಾರವಾದ ರಣ್ಯ ವಲಯ ಹಾಗೂ ಸಾಲು ಸಾಲು ಮರಗಳ ನಾಶಕ್ಕೆ ಮೂಲ ಕಾರಣವಾಗಿದೆ"  ಯುನೈಟೆಡ್ ಕನ್ಸರ್ವೇಶನ್ ಮೂವ್‌ಮೆಂಟ್‌ನ ಎಸ್‌.ಎಚ್. ​​ಸಹದೇವ್ ಹೇಳಿದ್ದಾರೆ.

ಚತುಷ್ಪಥ ರಸ್ತೆ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ ಪರಿಸರವಾದಿಗಳು ಇದು ಸಂಪೂರ್ಣವಾಗಿ ಅನಗತ್ಯ ಯೋಜನೆ ಎಂದಿದ್ದಾರೆ. “ಬೆಂಗಳೂರು-ಶಿವಮೊಗ್ಗ ಹೆದ್ದಾರಿಯಲ್ಲಿ ಹೆಚ್ಚಿನ ದಟ್ಟಣೆ ಇಲ್ಲಇಲ್ಲಿ ರಸ್ತೆ ಪರಿಸ್ಥಿತಿ ಸರಿಯಿಲ್ಲದ ಕಾರಣ ಅಪಘಾತವಾಗುತ್ತಿದೆ ಅಲ್ಲದೆ ಹೆಚ್ಚಿನ ವಾಹನ ದಟ್ಟಣೆ, ಸಂಚಾರ ನಿಯಮ ಉಲ್ಲಂಘನೆಯಿಂದಲ್ಲ. ಇಂತಹಾ ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿದರೆ ಮಾನವ-ಪ್ರಾಣಿಗಳ ಸಂಘ್ರಷಕ್ಕೆ ಕಾರಣವಾಗಲಿದೆ. ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ  ಪ್ರದೇಶ ಮಳೆಯ ಪ್ರಮಾಣ ಕಡಿಮೆ ಇರುವ ಜಾಗವಾಗಿದೆ.  ಕಡಿಮೆ ಸಸ್ಯವರ್ಗವನ್ನು ಹೊಂದಿದೆ. ಈ ಪ್ರದೇಶಗಳು ಪಶ್ಚಿಮ ಘಟ್ಟಗಳಿಗೆ ಆರಂಭಿಕ ಹಂತವಾಗಿದೆ ಆದ್ದರಿಂದ ಈ ಬೃಹತ್ ಮರದ ಹೊದಿಕೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಎಂದು ಅವರು ಅಭಿಪ್ರಾಯಪಟ್ಟರು.
 

SCROLL FOR NEXT