ರಾಜ್ಯ

ಕಾಂಗ್ರೆಸ್ ಸಭೆಗೆ ದುಬೈನಿಂದ ಆಗಮಿಸಿದ್ದ ರುಕ್ಸಾನಾ ಉಸ್ತಾದ್ ವಾಪಸ್ ಕಳುಹಿಸಿದ ನಾಯಕರು

Shilpa D

ಬೆಂಗಳೂರು:  ಕಾಂಗ್ರೆಸ್ ಹಿರಿಯ ನಾಯಕ ಎಂಎಲ್ ಉಸ್ತಾದ್ ಪುತ್ರಿ ಕಳೆದ 10 ದಿನಗಳ ಹಿಂದೆ ದುಬೈನಿಂದ ಆಗಮಿಸಿದ್ದರು.  ನಿನ್ನೆ ನಡೆದ ಕೆಪಿಸಿಸಿ ಸಭೆಗೆ ಹಾಜರಾಗಲು ಕಾಂಗ್ರೆಸ್ ಕಚೇರಿಗೆ ಬಂದಿದ್ದರು.

ರುಕ್ಸಾನಾ ಅವರಿಗೆ ಗೃಹ ಬಂಧನ ವಿಧಿಸಿದ್ದರು ಅವರು ಸಾರ್ವಜನಿಕವಾಗಿ ಸಭೆಗೆ ಹಾಜರಾಗಲು ಬಂದಿದ್ದರು, ಕೆಪಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕರೆದಿದ್ದ ಜಿಲ್ಲಾ ಮಟ್ಟದ ಕಾರ್ತರ ಸಭೆಗೆ ಹಾಜರಾಗಲು ಬಂದಿದ್ದರು.

ಶಿವಕುಮಾರ್ ಅವರ ಕಚೇರಿ ರುಕ್ಸಾನಾ ಅವರ ಕಚೇರಿಗೆ ಭೇಟಿ ನೀಡುವುದನ್ನು ಮತ್ತು ಸಭೆಯಲ್ಲಿ ಪಾಲ್ಗೊಳ್ಳುವುದನ್ನು ತೀವ್ರವಾಗಿ ನಿರಾಕರಿಸಿದ್ದರೂ ರುಕ್ಸಾನಾ ಆಗಮಿಸಿದ್ದರು ಎಂದು ಹೇಳಲಾಗಿದೆ.

ಸಭೆಗೆ ರುಕ್ಸಾನಾ ಆಗಮಿಸಿದ ವೇಳೆ ಅವರು ದುಬೈನಿಂದ ಬಂದು ಕೇವಲ 10 ದಿನಗಳಾಗಿದೆ. ಹೀಗಾಗಿ ಸಭೆಗೂ ಹಾಜರಾಗುವುದು ಬೇಡವೆಂದು ಹೇಳಿದ್ದರೂ ಬಂದಿದ್ದರು, ಕಾರ್ಯಕರ್ತರು ಅವರನ್ನು ವಾಪಸ್ ಹೋಗುವಂತೆ ಹೇಳಿದಾಗ ಅವರ ಬಿಪಿ ಹೆಚ್ಚಾಗಿ ಕೊನೆಗೆ ವೈದ್ಯರ ಬಳಿ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ. 

SCROLL FOR NEXT