ರಾಜ್ಯ

ಕೋವಿಡ್‌ -19 ಎಫೆಕ್ಟ್: ಮಂಗಳೂರಿನ ಧಕ್ಕೆಯಲ್ಲಿ ಮೀನುಗಾರಿಕೆ ಸ್ಥಗಿತ

Lingaraj Badiger

ಮಂಗಳೂರು: ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮೀನುಗಾರಿಕಾ ಚಟುವಟಿಕೆಯ ಪ್ರದೇಶವಾದ ಧಕ್ಕೆಯನ್ನು ಬಂದ್ ಮಾಡುವಂತೆ ಶುಕ್ರವಾರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬುಧವಾರ ನಾವು ಮೀನುಗಳನ್ನು ಹಿಡಿದು ರಾಶಿ ಹಾಕಿದ್ದೇವೆ. ಆದರೆ ಇನ್ನೂ ಮಾರಾಟವಾಗಿಲ್ಲ ಎಂದು ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೆಲವು ಮೀನುಗಾರರು ಪೊಲೀಸರ ಅನುಮತಿ ಪಡೆದು ಮೀನು ಮಾರಾಟ ಮಾಡುವ ಸ್ಥಳಗಳಿಗೆ ತಲುಪಿಸಿದ್ದಾರೆ. ಮೀನುಗಾರಿಕೆಗೆ ತೆರಳಿದ್ದ ಎಲ್ಲಾ ಬೋಟ್‌ಗಳು ಮತ್ತೆ ದಡಕ್ಕೆ ಬಂದು ಬಂದರಿನಲ್ಲಿ ಲಂಗರು ಹಾಕಿವೆ.

ಈಗಾಗಲೇ ಮೀನುಗಾರಿಕೆಗೆ ತೆರಳಿದವರಿಗೆ ಹಿಂದಿರುಗುವಂತೆ ಸೂಚನೆ ರವಾನಿಸಲಾಗಿದೆ. ಧಕ್ಕೆಯಲ್ಲಿ 400 ಬೋಟ್‌ಗಳು ನಿಂತಿರುವುದನ್ನು ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ಇರುವುದನ್ನು ಗಮನಿಸಿದ ಬಳಿಕ ಧಕ್ಕೆಯನ್ನು ಬಂದ್ ಮಾಡುವಂತೆ ಮೀನುಗಾರಿಕೆ ಇಲಾಖೆ ನಿರ್ದೇಶನ ನೀಡಿದೆ.

SCROLL FOR NEXT