ರಾಜ್ಯ

ಕೊರೋನಾ ಎಫೆಕ್ಟ್: ಎಲ್ಲಾ ಮಧ್ಯಂತರ, ಜಾಮೀನು, ಕಟ್ಟಡ ನೆಲಸಮ ಆದೇಶ ಒಂದು ತಿಂಗಳು ವಿಸ್ತರಣೆ

Manjula VN

ಬೆಂಗಳೂರು: ಕೊರೋನಾ ವೈರಸ್ ಮರಣ ಮೃದಂಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇಡೀ ರಾಜ್ಯವನ್ನು ಲಾಕ್'ಡೌನ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಎಲ್ಲಾ ನ್ಯಾಯಾಲಯಗಳು ಸೀಮಿತ ಅವಧಿಗೆ ಹೊರಡಿಸಿರುವ  ಮಧ್ಯಂತರ ಆದೇಶ, ಜಾಮೀನು ಆದೇಶ ಹಾಗೂ ಭೂ ಒತ್ತುವರಿ ತೆರವು ಆದೇಶಗಳನ್ನು  ಹೈಕೋರ್ಟ್ ಒಂದು ತಿಂಗಳ ಕಾಲ ವಿಸ್ತರಿಸಿದೆ. 

ಕೇಂದ್ರ ಸರ್ಕಾರ ಮಾ.24ರಂದು ಭಾರತ ಲಾಕ್ ಡೌನ್'ಗೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲಾಗುತ್ತಿಲ್ಲ ಎಂದು ಜನರು ಸಂಕಷ್ಟಕ್ಕೀಡಾಗಬಾರದು. ಹೈಕೋರ್ಟ್, ಜಿಲ್ಲಾ ನ್ಯಾಯಾಲಯ, ನಾಗರೀಕ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ಕೈಗಾರಿಕಾ ಹಾಗೂ ಇತರೆ ನ್ಯಾಯಮಂಡಳಿಗಳ ಆದೇಶಗಳನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. 

SCROLL FOR NEXT