ರಾಜ್ಯ

ಕೊರೋನಾ ವಿರುದ್ಧ ಸಮರ: 50 ಲಕ್ಷ ದೇಣಿಗೆ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ 

Raghavendra Adiga

ಬೆಂಗಳೂರು: ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ತಾವು ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದು 50 ಲಕ್ಷ ರೂ ದೇಣಿಗೆ ನೀಡಿದ್ದಾರೆ ಮಾತ್ರವಲ್ಲದೆ  ಪ್ರಧಾನ ಮಂತ್ರಿಗಳ ತುರ್ತು ಪರಿಹಾರ ನಿಧಿಗೆ ಎರಡು ತಿಂಗಳ ವೇತನವನ್ನು 2,00,000 ರೂ. ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ತಿಂಗಳ ವೇತನವನ್ನು 2,00,000 ರೂ ನೀಡಿದ್ದಾರೆ.

ಸುಮಲತಾ ಈ ಸಂಬಂಧ ಟ್ವೀಟ್ ಮಾಡಿಕೊಂಡಿದ್ದು "ಕೋವಿಡ್ -19 ಮಹಾಮಾರಿ ದೇಶದಲ್ಲಿ ಹರಡುತ್ತಿದ್ದು, ಅದರ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನನ್ನ ಕಳಕಳಿಯ ಕೊಡುಗೆ.ಮೊದಲಿಗೆ ಮಂಡ್ಯದ ಮಿಮ್ಸ್ ಗೆ ಕೊರೊನ ವಿರುದ್ಧ ಹೊರಡುವ ಸಲುವಾಗಿ  ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50, 00, 000 ಲಕ್ಷ ರೂ. ಗಳನ್ನು ನೀಡಿದ್ದೇನೆ" ಎಂದಿದ್ದಾರೆ.

ಇದಲ್ಲದೆ ಮಂಡ್ಯ ಸಂಸದರು ತಾವೊಬ್ಬ ಭಾರತೀಯ ನಾಗರಿಕಳಾಗಿ : ಪ್ರಧಾನ ಮಂತ್ರಿಗಳ ತುರ್ತು ಪರಿಹಾರ ನಿಧಿಗೆ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕ್ರಮವಾಗಿ ತಮ್ಮ ಎರಡು ತಿಂಗಳ ವೇತನ 2,00,000 ರೂ. ನೀಡಿದ್ದಾಗಿ ಹೇಳಿದ್ದಾರೆ.

ದೇಶಾದ್ಯಂತ ವ್ಯಾಪಿಸುತ್ತಿರುವ ಕೊರೋನಾವೈರಸ್ ಹಾವಳಿ ತಡೆಗೆ ನಿನ್ನೆ (ಗುರುವಾರ ಕೇಂದ್ರ ಸರ್ಕಾರ  1.70 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು.

SCROLL FOR NEXT