ರಾಜ್ಯ

ಮೈಸೂರು: ಮತ್ತೊಬ್ಬ ವ್ಯಕ್ತಿಯಲ್ಲಿ ಸೋಂಕು ದೃಢ, ನಂಜನಗೂಡಿನಲ್ಲಿ 1000 ಜನರ ಮೇಲೆ ನಿಗಾ

Manjula VN

ಮೈಸೂರು: ಕೊರೋನಾ ವೈರಸ್ ರೋಗವು ಮೈಸೂರಿನ ಮತ್ತೊಬ್ಬ ವ್ಯಕ್ತಿಯಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಸಂಬಂಧ ನಂಜನಗೂಡಿನಲ್ಲಿ 1000 ಜನರ ಮೇಲೆ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದಾರೆಂದು ತಿಳಿದುಬಂದಿದೆ. 

ನಂಜನಗೂಡಿನ ಔಷಧಿ ಉತ್ಪಾದನೆ ಕಂಪನಿಯಲ್ಲಿ ಗುಣಮಟ್ಟದ ಭರವಸೆ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ 35 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಈವರೆಗೂ ಇವರದು ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಹಾಗೂ ಸಂಪರ್ಕ ಮಾಹಿತಿ ಸಿಕ್ಕಿಲ್ಲ. ಆದರೆ, ಸೋಂಕಿತ ವ್ಯಕ್ತಿ ಅನೇಕ ವೃತ್ತಿಪರರೊಂದಿಗೆ ಸಂಪರ್ಕ ಹೊಂದಿದ್ದು, ಇವರಲ್ಲಿ 7 ಮಂದಿಯನ್ನು ಈಗಾಗಲೇ ಹೋಂ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯನ್ನು ಗೊತ್ತುಪಡಿಸಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಹೇಳಲಾಗುತ್ತಿದೆ. 

ಕಳೆದ ಮಾ.21ರಂದು ದುಬೈನಿಂದ ಮೈಸೂರಿಗೆ ಬಂದಿದ್ದ 35 ವರ್ಷದ ವ್ಯಕ್ತಿಯಲ್ಲಿ ಹಾಗೂ ಮಾ.23ರಂದು ದುಬೈನಿಂದ ಮೈಸೂರಿಗೆ ಬಂದಿದ್ದ ಕೇರಳ ಮೂಲದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು. ಈ ಇಬ್ಬರನ್ನೂ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವಲ್ಲೇ 3ನೇ ಪ್ರಕರಣದಲ್ಲಿ ಸೋಂಕು ತಗುಲಿರುವ 35 ವರ್ಷದ ವ್ಯಕ್ತಿಯು ಮೈಸೂರಿನಲ್ಲಿ ವಾಸವಿದ್ದು, ನಂಜನಗೂಡಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವ್ಯಕ್ತಿಗೆ ಯಾರಿಂದ? ಹೇಗೆ? ಎಲ್ಲಿ? ಕೊರೋನಾ ವೈರಸ್ ತಗುಲಿದೆ ಎಂಬುದನ್ನು ಆರೋಗ್ಯ ಇಲಾಖೆಯವರು ತನಿಖೆ ಮುಂದುವರೆಸಿದ್ದಾರೆ. ಮೈಸೂರಿನಲ್ಲಿ 3ನೇ ವ್ಯಕ್ತಿಯಲ್ಲಿ ವೈರಸ್ ದೃಢಪಟ್ಟಿರುವುದು ಜನರಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

ಈ ನಡುವೆ ನಂಜನಗೂಡಿನಲ್ಲಿ 1000 ಜನರ ಮೇಲೆ ಅಧಿಕಾರಿಗಳು ನಿಗಾವಹಿಸಲಾಗಿದ್ದು, ಇವರಲ್ಲಿ ಶೇ.8ರಷ್ಟು ಮಂದಿ ಐಸೋಲೇಷನ್ ಇರಿಸಲಾಗಿದೆ. ಉಳಿದವರನ್ನು 14 ದಿನಗಳ ಕಾಲ ಹೋಮ್ ಐಸೋಲೇಶನ್ ಮುಗುಸಿದ್ದಾರೆ. ಒಟ್ಟು 59 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 56 ವ್ಯಕ್ತಿಗೆ ನೆಗೆಟಿವ್ ಬಂದಿದೆ. ಮೂವರಿಗೆ ಸೋಂಕು ಇರುವುದು ದೃಫಟ್ಟಿದ್ದು, ಅವರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. 

SCROLL FOR NEXT