ರಾಜ್ಯ

ಬೆಂಗಳೂರು: ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ ಇಬ್ಬರ ಬಂಧನ

Shilpa D

ಬೆಂಗಳೂರು: ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಬೀದಿ ಬೀದಿಗಳಲ್ಲಿ ಸುತ್ತುತ್ತಾ ಸ್ಥಳೀರಲ್ಲಿ ಆತಂಕ ಮೂಡಿಸಿದ್ದ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿಯ 27 ವರ್ಷದ ವ್ಯಕ್ತಿಗೆ ಹೋಮ್ ಕ್ವಾರಂಟೈನ್ ಸ್ಟಾಂಪ್ ಹಾಕಲಾಗಿತ್ತು, ಹೀಗಿದ್ದರೂ ಆತ ಸುಮಾರು ಮೂರು ಬಾರಿ ಮನೆಯಿಂದ ಹೊರಗೆ ಬಂದು ಸುತ್ತಾಡುತ್ತಿದ್ದ. ಹೀಗಾಗಿ ಅವನ ವಿರುದ್ಧ ಎಫ್ ಐ ಆರ್ ದಾಖಲಿಸಿ ಬಂಧಿಸಿದ್ದಾರೆ. ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ದ ವ್ಯಕ್ತಿಯನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿ ಜಾಲಹಳ್ಳಿ ಹಾಗೂ ಸುತ್ತಮುತ್ತ ಓಡಾಡುತ್ತಿದ್ದದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಾ.17 ರಂದು ಇಂಡೋನೇಷ್ಯಾದಿಂದ ಬಂದಿದ್ದ ವ್ಯಕ್ತಿ ಕೈಗೆ ಮುದ್ರೆ ಹಾಕಲಾಗಿತ್ತು. ನಿಷೇಧಾಜ್ಞೆ ನಡುವೆಯೂ ಆತ ಜಾಲಹಳ್ಳಿ ಬಳಿ‌ ಬುಧವಾರ ಬೆಳಿಗ್ಗೆ ಓಡಾಡುತ್ತಿದ್ದ. 

ಆತನ ಕೈ ಮೇಲೆ ಮುದ್ರೆ ನೋಡಿದ್ದ ಪೊಲೀಸರು, ಆತನನ್ನು ಪ್ರಶ್ನಿಸಿದ್ದರು. ನಗರ ಸುತ್ತಲೂ ಬಂದಿರುವುದಾಗಿ ಆತ ಹೇಳಿದ್ದ. ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT