ರಾಜ್ಯ

ಉಡುಪಿಯಲ್ಲಿ ಎರಡು ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 83ಕ್ಕೇರಿಕೆ

Nagaraja AB

ಉಡುಪಿ :  ಉಡುಪಿಯಲ್ಲಿ ಇಂದು ಎರಡು ಹೊಸ  ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ

ಉಡುಪಿ ಸಮೀಪದ ಬಡಗುಬೆಟ್ಟು ಗ್ರಾಮದ 29 ವರ್ಷ ಪ್ರಾಯದ ಯುವಕ  ಹಾಗೂ 35 ವರ್ಷ ಪ್ರಾಯದ ಮಣಿಪುರ ರಾಜ್ಯದ ಯುವಕನಲ್ಲಿ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಮಣಿಪುರದ ಯುವಕ ಕಾರ್ಕಳದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರೆ, ಇನ್ನೊಬ್ಬ ಯುವಕ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿನ ಪರೀಕ್ಷೆಗೆ ದಾಖಲಾಗಿದ್ದ ಎಂದು ಹೇಳಲಾಗುತ್ತಿದೆ.

SCROLL FOR NEXT