ರಾಜ್ಯ

ಸ್ಲಂಗಳಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಹಾರ ಒದಗಿಸಲು ಮುಂದಾದ ಬೆಂಗಳೂರು ನಾಗರಿಕರು

Nagaraja AB

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ದಿನಗೂಲಿ ನೌಕರರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.ಇವರ ಆಹಾರದ ಸಮಸ್ಯೆ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಭಾನುವಾರ ವರದಿಯೊಂದು ಪ್ರಕಟವಾದ ಬೆನ್ನಲ್ಲೇ, ಅವರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಅನೇಕ ಸ್ವಯಂ ಸೇವಕರು ಹಾಗೂ  ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿವೆ.

ಇಂತಹ ಸಂಘಟನೆಗಳಲ್ಲಿ ಒಂದಾದ ಫೀಡ್ ಮೈ ಬೆಂಗಳೂರು ಸ್ವಯಂ ಸೇವಾ ಸಂಸ್ಥೆ  ಒಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಬಳಿಯ ನಾಗವಾರಪಾಳ್ಯ ಸ್ಲಂನಲ್ಲಿರುವ ಕುಟುಂಬಗಳಿಗೆ 250 ಪುಡ್ ಪಾಕೆಟ್ ಗಳನ್ನು  ವಿತರಿಸಿದೆ. 

ಕುಟುಂಬದಲ್ಲಿನ ನಾಲ್ಕು ಜನರಿಗೆ ಆಗುವಷ್ಟು 250 ಪುಡ್ ಪಾಕೆಟ್ ಗಳನ್ನು ನೀಡುತ್ತಿರುವುದಾಗಿ ತಿಳಿಸಿದ ಸ್ವಯಂ ಸೇವಕಿ ದಿವ್ಯಾ ಪ್ರಭಾಕರ್,  ಇನ್ನು ಹೆಚ್ಚಿನ ಮನೆಗಳಿಗೆ ಆಹಾರವನ್ನು ಒದಗಿಸಲಾಗುವುದು, ಅದಕ್ಕಾಗಿ ಮನೆಗಳನ್ನು ಲೆಕ್ಕ ಹಾಕಲಾಗುತ್ತಿದೆ ಎಂದು ಅವರು ಹೇಳಿದರು. 

ಬೆಂಗಳೂರಿನ ವಿವಿಧೆಡೆಯಲ್ಲಿ 5 ಸಾವಿರ ಪುಡ್ ಪಾಕೆಟ್ ಗಳನ್ನು ಈ ಸಂಘಟನೆ ವಿತರಿಸಿದೆ. ಇದನ್ನು 12 ಸಾವಿರಕ್ಕೆ ಹೆಚ್ಚಿಸುವ ಉದ್ದೇಶವಿದೆ. ಕೊಳಗೇರಿಯಲ್ಲಿ ವಾಸಿಸುವ ಜನರಿಗೆ ಆಹಾರ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿದ್ದು, ಆಹಾರ ಪೂರೈಕೆ ಮಾಡುವ ಕಾಯಕದಲ್ಲಿ ನಿರತವಾಗಿವೆ.

ಸುಮಾರು 300 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಒಂದು ಗುಡಿಸಿಲಿನಲ್ಲಿ 8 ರಿಂದ 15 ಮಂದಿ ವಾಸಿಸುತ್ತಿದ್ದಾರೆ. ದಿನಗೂಲಿ, ಪಡಿತರ ಕಾರ್ಡ್ ಸಿಗದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಹಾಗಾಗೀ ತಮ್ಮ ಸ್ವಗ್ರಾಮ ಯಾದಗಿರಿಗೆ ಹೋಗಲು ಬಯಸಿದ್ದಾರೆ.

SCROLL FOR NEXT