ರಾಜ್ಯ

ಇಡೀ ದೇಶ ದೇಶ ಲಾಕ್ ಡೌನ್ ಆಗಿದ್ದರೆ ಇಲ್ಲಿನ ಗೊಲ್ಲರಹಳ್ಳಿಯಲ್ಲಿ ನಡೆಯಿತು ಕಾಳಿಕಾದೇವಿ ಜಾತ್ರೆ!

Srinivas Rao BV

ಹೊಸಪೇಟೆ: ರಾಜ್ಯಾದ್ಯಂತ ಕೊರೋನಾ ವೈರಸ್ ಭೀತಿ ವ್ಯಾಪಕವಾಗಿರುವ ಸಂದರ್ಭದಲ್ಲಿ ಸರ್ಕಾರದ ಎಚ್ಚರಿಕೆಯನ್ನು ಉಲ್ಲಂಘಿಸಿ ಇಲ್ಲಿನ ಗೊಲ್ಲರಹಳ್ಳಿಯಲ್ಲಿ ಕಾಳಿಕಾದೇವಿ ರಥೋತ್ಸವ ನಡೆಸಲಾಗಿದೆ.

ಈ ಹಿನ್ನೆಲೆಯಲ್ಲಿ 15ಜನರ ಮೇಲೆ ಮರಿಯಮ್ಮನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಜಿಲ್ಲಾಡಳಿತ ಈ ಬೆಳವಣಿಗೆ ಬಗ್ಗೆ ತೀವ್ರ ಆಕ್ರೋಶಗೊಂಡಿದೆ. ಕೊರೋನಾ ವೈರಸ್ ಹಿನ್ನೆಲೆ ಲಾಕ್ ಡೌನ್ ಘೋಷಿಸಲಾಗಿದೆ. ಕೋರೊನಾ ವೈರಸ್ ಸೊಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ಹಾಗೂ ಅದರ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿಆರ್ ಪಿಸಿ ಸೆಕ್ಷನ್ 144 ಅನ್ವಯ ಕರ್ಪ್ಯೂ ಜಾರಿಗೊಳಿಸಲಾಗಿದೆ.

ಇದನ್ನು ಉಲ್ಲಂಘಿಸಿ ಜಾತ್ರೆ ನಡೆಸಿದ ಆರೋಪದ ಮೇರೆಗೆ ಹೊಸಪೇಟೆ ತಾಲೂಕಿನ
ಗೊಲ್ಲರಹಳ್ಳಿ ಗ್ರಾಮದ ಮುಖಂಡರಾದ ಕಾಳಪ್ಪ ಫಕ್ಕಿರಪ್ಪ(42),ಜಿ.ಬಿ.ನಾಗರಾಜ (50),ದಾಸರ ವೆಂಕಟೇಶ (46),ಕೋಮಾರಪ್ಪ(70),ಅನಂತಪ್ಪ ಡಿ.ಕೆ(58),ಸುರೇಶ ಮೈಲಪ್ಪ(36),ಕೆಂಚಪ್ಪ ಕಾಳಪ್ಪ(45),ಸಣ್ಣ ಹನುಮಂತಪ್ಪ(85),ನಾಗರಾಜ ಬನ್ನಿಯಪ್ಪ(40),ಈರಮ್ಮನವರ್ ಕೆಂಚಪ್ಪ(70),ಪುರ್ಲಿ ಕಾಳಶ್ರಪ್ಪ(40),ಸೋಮಪ್ಪ ಹುಚ್ಚಪ್ಪ(32),ಸುಣಗಾರ ದುರ್ಗೇಶ(37),ಗುರಿಕಾರ ಕಾಳಪ್ಪ ಮತ್ತು ಬಲವಂತಪ್ಪ ಅವರ ಮೇಲೆ ಪ್ರಕರಣ ದಾಖಲಾಗಿದೆ.

ರಥವನ್ನು ನಿನ್ನೆ ಸಂಜೆ 6 ಕ್ಕೆ ಎಳೆಯುವ ಬದಲಿಗೆ ಮಧ್ಯಾಹ್ನ 3:30ಕ್ಕೆ ಎಳೆಯಲಾಗಿದೆ. ರಥ ಎಳೆಯುವ ಸಮಯದಲ್ಲಿ ಗ್ರಾಮದ ಜಿ.ಬಿ.ನಾಗರಾಜ ಇವರ ಕಾಲಿನ ಮೇಲೆ ರಥದ ಚಕ್ರ ಹಾಯ್ದು ಕಾಲಿಗೆ ರಕ್ತಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ಒಂದು ದಿನ ಮುಂಚೆ ತೆರಳಿ ಅಧಿಕಾರಿಗಳು ತೆರಳಿ ರಥೋತ್ಸವ ನಡೆಸದಂತೆ ಹಾಗೂ ಕೊರೊನಾ ವೈರಸ್ ಕುರಿತು ತಿಳಿವಳಿಕೆ ನೀಡಲಾಗಿತ್ತು. ಆದರೂ ನಿನ್ನೆ ಆದೇಶ ಉಲ್ಲಂಘಿಸಿ ರಥೋತ್ಸವ ನಡೆಸಲಾಗಿದೆ.

SCROLL FOR NEXT