ರಾಜ್ಯ

25 ಸಂಸದರಿದ್ದರೂ ಶ್ರಮಿಕ್ ರೈಲು ಬಿಡಿಸಲಾಗಿಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

Nagaraja AB

ಕಲಬುರಗಿ: ರಾಜ್ಯದಲ್ಲಿ 25 ಸಂಸದರಿದ್ದರೂ ಕೂಲಿ ಕಾರ್ಮಿಕರನ್ನು ಕರೆತರಲು  ಶ್ರಮಿಕ್ ರೈಲು ವ್ಯವಸ್ಥೆ ಮಾಡಿಲ್ಲ. ಅಲ್ಲದೇ, ಬಸ್ಸು ಪ್ರಯಾಣ ಸೇವೆ ಕೂಡಾ  ಉಚಿತವಾಗಿಲ್ಲ ಎಂದು ಶಾಸಕ   ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ

ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ, ತಾವು ಇದನ್ನು ಕೇವಲ  ಟ್ವಿಟರ್ ನಲ್ಲಿ ಹೇಳಿಕೊಂಡರೆ, ನಿಮ್ಮವರೇ ನಿಮ್ಮನ್ನು ' ಟ್ವಿಟರ್ ಜಾಧವ್' ಎಂದು  ನಾಮಕರಣ ಮಾಡಿಬಿಡುತ್ತಾರೆ " ಎಂದು ಕಲಬುರಗಿ ಸಂಸದ ಉಮೇಶ್ ಜಾಧವ್ ಅವರಿಗೆ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡುವ ಮೂಲಕ ಕುಟುಕಿದ್ದಾರೆ

ಸರ್ಕಾರದ  ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಲಾಕ್ ಡೌನ್  ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ವಲಸೆ ಕಾರ್ಮಿಕರನ್ನು ತವರಿಗೆ ಕರೆತರಲು  ಸರ್ಕಾರದಿಂದ ಸೂಕ್ತ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ ಎಂದು  ಜಾಧವ್ ಟ್ವೀಟ್ ಮಾಡಿದ್ದಕ್ಕೆ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.

ತಮ್ಮನ್ನು 'ಟ್ವಿಟರ್ ಖರ್ಗೆ' ಎಂದು  ವ್ಯಂಗ್ಯವಾಡಿದ್ದಕ್ಕೆ ಅದೇ ಹೆಸರನ್ನು ಪ್ರಸ್ತಾಪಿಸಿ ಪ್ರತಿವ್ಯಂಗ್ಯವಾಡುವ ಮೂಲಕ ಜಾಧವ್  ಅವರಿಗೆ ಅವರ ಪಕ್ಷದವರೇ ಟ್ವಿಟರ್ ಜಾಧವ್ ಎಂದು ನಾಮಕರಣ ಮಾಡುತ್ತಾರೆ ಹುಷಾರ್ ಎಂದು  ಕುಟುಕಿದ್ದಾರೆ

SCROLL FOR NEXT