ರಾಜ್ಯ

ಜಪ್ತಿ ಮಾಡಲ್ಪಟ್ಟ ವಾಹನ ಮಾಲೀಕರಿಂದ ದಂಡ ವಸೂಲಿ: ಶನಿವಾರವೂ ಮುಂದುವರಿದ ವಾಹನ ಹಸ್ತಾಂತರ ಕಾರ್ಯ

Nagaraja AB

ಬೆಂಗಳೂರು: ಕೊರೋನಾ ಲಾಕ್ ಡೌನ್ ಉಲ್ಲಂಘಿಸಿ ಸಂಚರಿಸಿದ ವೇಳೆ‌ ಪೊಲೀಸರು ಬೆಂಗಳೂರು ನಗರದಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಕಾರ್ಯ ಶನಿವಾರ ಕೂಡ ಮುಂದುವರಿದಿದೆ

ಜಪ್ತಿ ಮಾಡಲಾಗಿದ್ದ  ವಾಹನ ಚಾಲಕರು ಸವಾರರು ಪೊಲೀಸ್ ಠಾಣೆ ಗಳಿಗೆ ದೌಡಾಯಿಸಿ ದಂಡ ಪಾವತಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ವಾಹನಗಳನ್ನು ಪಡೆಯುತ್ತಿದ್ದ ದೃಶ್ಯ ಕಂಡುಬಂತು. ಮೊದಲು ಬಂದವರಿಗೆ ಆದ್ಯತೆ ಮೇಲೆ ವಾಹನಗಳನ್ನು ಹಿಂತಿರುಗಿಸಲಾಗುತ್ತಿದೆ. ವಾಹನಗಳನ್ನು ವಾಪಸ್ ನೀಡುವ ಮುನ್ನ ಮತ್ತೆ ಲಾಕ್ ಡೌನ್ ಉಲ್ಲಂಘಿಸಿದಂತೆ ಷರತ್ತು ವಿಧಿಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ

ವಾಹನ ಮಾಲೀಕರನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ ಆರ್ ಸಿ, ಡಿಎಲ್ ಹಾಗೂ ಇನ್ಸೂರೆನ್ಸ್ ತೋರಿಸುವುದರ ಜೊತೆಗೆ ದಂಡ ಪಾವತಿಸಿ, ನಷ್ಟ ಪರಿಹಾರದ ಬಾಂಡ್ ಸಲ್ಲಿಸಿದರ ವಿವರಗಳನ್ನು ಪರಿಶೀಲಿಸಿ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ಠಾಣೆಗೂ ಅಗತ್ಯ ವಿರುವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

ಸಂಚಾರ ನಿಯಮ ಉಲ್ಲಂಘನೆಯ ಹಳೆ ದಂಡ ಬಾಕಿಯಿದ್ದರೆ ಅದನ್ನು ವಸೂಲಿ ಮಾಡಲಾಗುತ್ತಿದೆ. ಇದರಿಂದಾಗಿ ಎಲ್ಲಾ ದಾಖಲೆಗಳು ಸರಿಯಾಗಿದ್ದವರು ಮಾತ್ರ ವಾಹನ ವಾಪಸ್ ಪಡೆಯಲು ಠಾಣೆಗೆ ಆಗಮಿಸುತ್ತಿದ್ದಾರೆ

ಜಪ್ತಿ ಆಗಿರುವ ದ್ವಿಚಕ್ರ ಹಾಗೂ ಆಟೋಗಳಿಗೆ 500 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1,000 ರೂ.ದಂಡವನ್ನು ಪೊಲೀಸ್ ಇಲಾಖೆ ವಸೂಲಿ ಮಾಡುತ್ತಿದೆ‌. ಮಾಲೀಕರಿಗೆ ಬೆಂಗಳೂರು ಒನ್ ಆನ್ ಲೈನ್ ಮೂಲಕವೂ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

 ಲಾಕ್ ಡೌನ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಳೆದ ಮಾ.30 ರಿಂದ ಇಲ್ಲಿಯವರೆಗೆ 48,100 ವಾಹನಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದರು.

SCROLL FOR NEXT