ರಾಜ್ಯ

ಹೈಟೆಕ್ ಮಾಸ್ಕ್ ಧರಿಸಿ ಎಲ್ಲರ ಗಮನ ಸೆಳೆದ ಸಚಿವ ಶ್ರೀರಾಮುಲು

Manjula VN

ಬೆಂಗಳೂರು: ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಶುಕ್ರವಾರ ಧರಿಸಿದ್ದ ಹೈಟೆಕ್ ಮಾಸ್ಕ್ ವೊಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. 

ಶ್ರೀರಾಮುಲು ಧರಿಸಿರುವ ಮಾಸ್ಕ್ ಒಂದು ರೀತಿಯ ಗ್ಯಾಸ್ ಮಾಸ್ಕ್ ರೀತಿ ಕಂಡು ಬರುತ್ತಿದ್ದು, ಸಚಿವರು ಓಡಾಡಿದ ಸ್ಥಳದಲ್ಲಿದ್ದವರೆಲ್ಲಾ ಅವರ ಮಾಸ್ಕ್ ಮೆಲೇಯೇ ಕಣ್ಣಾಯಿಸುತ್ತಿರುವುದು ಕಂಡು ಬಂದಿತ್ತು. 

ಈ ಬಗ್ಗೆ ಮಾತನಾಡಿದ ಶ್ರೀರಾಮುಲು ಅವರು, ಮಾಸ್ಕ್'ನ್ನು ಸಿಂಥೆಟಿಕ್ ವಸ್ತುವಿನಿಂದ ಮಾಡಲಾಗಿದ್ದು, ಅಮೆರಿಕಾದಲ್ಲಿರುವ ನನ್ನ ಸ್ನೇಹಿತರೊಬ್ಬರು ನನಗೆ ಉಡುಗೊರೆಯಾಗಿ ನೀಡಿದ್ದರು. ಲಾಕ್'ಡೌನ್ ಘೋಷಣೆಯಾಗುವುದಕ್ಕೂ ಮುಂಚೆಯೇ ಅವರು ನನಗೆ ಈ ಉಡುಗೊರೆಯನ್ನು ನೀಡಿದ್ದರು ಎಂದು ಹೇಳಿದ್ದಾರೆ. 

ಮಾಸ್ಕ್ ನಲ್ಲಿ ಎರಡೂ ಬದಿಯಲ್ಲೂ ಎರಡು ವಿಭಾಗಗಳಿದ್ದು, ಮಧ್ಯದಲ್ಲಿ ಮೈಕ್ರೋಫೋನ್ ಇದೆ. ಒಂದು ಬದಿಯಲ್ಲಿ ಆಮ್ಲಜನಕ ಬರಲು ಹಾಗೂ ಮತ್ತೊಂದು ಬದಿಯಲ್ಲಿ 3ಎಂ ಏರ್ ಫಿಲ್ಟರ್ ವ್ಯವಸ್ಥೆಗಳಿವೆ. ಒಮ್ಮೆ ಮಾಸ್ಕ್ ಧರಿಸಿದ ಬಳಿಕ ಅದನ್ನು ತೆಗೆದು ಸ್ವಚ್ಥಗೊಳಿಸಿ, ಮತ್ತೆ ಧರಿಸಬಹುದಾಗಿದೆ. 

ಮಾಸ್ಕ್'ನ್ನು 6 ತಿಂಗಳ ಕಾಲ ಧರಿಸಬಹುದು. ನನಗೆ ಯಾವುದೇ ಉಸಿರಾಟ ಸಮಸ್ಯೆಗಳಿಲ್ಲ. ಮಾಸ್ಕ್ ನ್ನು ತೆಗೆದು ಸ್ವಚ್ಛಗೊಳಿಸಿ ಮತ್ತೆ ಧರಿಸಲೂ ಬಹುದು ಎಂದು ಶ್ರೀರಾಮುಲು ತಿಳಿಸಿದ್ದಾರೆ. 

ಈ ವರೆಗೂ ನನ್ನ ಬಳಿ 40 ಮಾಸ್ಕ್ ಗಳಿವೆ. ಪ್ರತೀನಿತ್ಯ ಬದಲಾಯಿಸುತ್ತಿರುತ್ತೇನೆ. ಪ್ರತೀನಿತ್ಯ ನಾನು ಬಳಕೆ ಮಾಡುವ ಮಾಸ್ಕ್ ಗಳು ಯೂಸ್ ಆ್ಯಂಡ್ ಥ್ರೋ ಮಾಸ್ಕ್ ಗಳೇ ಆಗಿರುತ್ತವೆ. ಆದರೆ ನನ್ನ ಬಳಿ ಇರುವ 40 ಮಾಸ್ಕ್ ಗಳನ್ನು ಹಾಕಿಕೊಂಡ ಬಳಿಕ ತೆಗೆದು ಮತ್ತೆ ಸ್ವಚ್ಚಗೊಳಿಸಿ ಮರುಬಳಕೆ ಮಾಡಬಹುದಾಗಿದೆ. ಬಳಕೆ ಬಗ್ಗೆ ಆಗಾಗ ಪರೀಕ್ಷೆ ನಡೆಸುತ್ತಿರುತ್ತೇನೆ. ಪ್ರತೀನಿತ್ಯ ರೋಗಿಗಳ ಕುರಿತು ಪರಿಶೀಲನೆ ನಡೆಸಲು ವೈದ್ಯರ ಬಳಿ ಹೋಗುವುದರಿಂದ ಇಷ್ಟು ಮುಂಜಾಗ್ರತೆಯ ಅಗತ್ಯವಿದೆ ಎಂದಿದ್ದಾರೆ. 

SCROLL FOR NEXT