ಬೆಂಗಳೂರು: ಬೆಂಗಳೂರಿನಲ್ಲಿ ಲಾಕ್ ಡೌನ್ ನಿಂದಾಗಿ 40 ದಿನಗಳಿಂದ ಮದ್ಯ ಇಲ್ಲದೆ ತತ್ತರಿಸಿದ್ದ ಮದ್ಯಪ್ರಿಯರು ನಾಳೆಯಿಂದ ಬೆಳಗ್ಗೆಯಿಂದ ಮದ್ಯ ಸಿಗುತ್ತದೆ ಅಂತಾ ಇಂದಿನಿಂದಲೇ ಬೆಂಗಳೂರಿನಲ್ಲಿ ಕ್ಯೂ ನಿಂತಿದ್ದಾರೆ.
ನಗರದ ಬಳೆಪೇಟೆಯಲ್ಲಿರುವ ಬೆಲ್ ವೈನ್ಸ್ ಮುಂದೆ ನೂರಾರು ಸಂಖ್ಯೆಯಲ್ಲಿ ಮದ್ಯಪ್ರಿಯರು ಸಾಲು ಗಟ್ಟಿ ನಿಂತಿದ್ದಾರೆ. ಇದೇ ವೇಳೆ ಸಾಮಾಜಿಕ ಅಂತವನ್ನು ಕುಡುಕರು ಪಾಲಿಸುತ್ತಿದ್ದಾರೆ.
ಇದೇ ವೇಳೆ ಬೂದಿಕೋಟೆ ಗ್ರಾಮದಲ್ಲಿ ಮದ್ಯದಂಗಡಿಗೆ ಪೂಜೆ ಸಹ ಮಾಡಿದ್ದಾರೆ. ಇನ್ನು ಹಲವು ಮದ್ಯದಂಗಡಿ ಮಾಲೀಕರು ಅಂಗಡಿಗಳಿಗೆ ಸಿರಿಯಲ್ ಸೆಟ್ ಅನ್ನು ಹಾಕಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ರೆಡ್, ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.