ರಾಜ್ಯ

ಮಂಗಳೂರಿನಲ್ಲಿ ರಸ್ತೆಗಿಳಿದ ಕಾಡುಕೋಣ, ಸಾರ್ವಜನಿಕರಲ್ಲಿ ತಳಮಳ

Raghavendra Adiga

ಮಂಗಳೂರು: ಲಾಕ್‌ಡೌನ್‌ನಿಂದ ಜನರ ಓಡಾಟ ಕಡಿಮೆಯಾಗಿ ರಸ್ತೆಗಳಲ್ಲಿ ಪ್ರಶಾಂತ ವಾತಾವರಣದ ಸಂದರ್ಭದಲ್ಲೇ ಕಾಡು ಪ್ರಾಣಿಗಳು ರಸ್ತೆಗಿಳಿಯಲು ಆರಂಭಿಸಿವೆ.

ಕೇರಳದ ಹಲವೆಡೆ ಆನೆಗಳು ರಸ್ತೆಯಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಮಂಗಳೂರಿನಲ್ಲಿ ಕಾಡುಕೋಣವೊಂದು ರಸ್ತೆಗೆ ಬಂದು ಅಚ್ಚರಿ ಮೂಡಿಸಿದೆ.

ಬುಧವಾರ ಮುಂಜಾನೆ ನಗರದ ಹ್ಯಾಟ್ ಹಿಲ್ ಬಳಿ ದೊಡ್ಡ ಗಾತ್ರದ ಕಾಡುಕೋಣ ಏಕಾಏಕಿ ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದರು. ರಸ್ತೆಯುದ್ದಕ್ಕೂ ಓಡುತ್ತಿದ್ದ ಕಾಡುಕೋಣದ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧದಲ್ಲಿ ನಿರತವಾಗಿದ್ದಾರೆ. ಈ ಮಧ್ಯೆಕಾಡುಕೋಣವನ್ನು ಸುರಕ್ಷಿತವಾಗಿ ಹಿಡಿಯುವ ಕುರಿತು ಅರಣ್ಯ ಇಲಾಖೆಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಲಾಕ್‌ಡೌನ್ ಕಾರಣದಿಂದಾಗಿ ಜನಸಂಚಾರವಿಲ್ಲದ  ಕಾರಣ ಪ್ರಾಣಿಗಳು ನಗರಕ್ಕೆ ಬಂದಿರಬೇಕು ಎಂದು ಹೇಳಲಾಗುತ್ತಿದೆ

SCROLL FOR NEXT