ರಾಜ್ಯ

ಉತ್ತರ ಕರ್ನಾಟಕ: ಬಾದಾಮಿ ಮೂಲದ ಸೋಂಕಿತ ಗರ್ಭಿಣಿಯಿಂದ ನೂರಾರು ಜನರಿಗೆ ಹರಡುವ ಅಪಾಯ!

Manjula VN

ಬಾಗಲಕೋಟೆ: ಬಾದಾಮಿ ಮೂಲದ ಸೋಂಕಿತ 23 ವರ್ಷದ ಗರ್ಭಿಣಿಯಿಂದಾಗಿ ನೂರಾರು ಜನರು ಅಪಾಯಕ್ಕೆ ಸಿಲುಕುವಂತಾಗಿದೆ. 

ರೋಗಿ ಸಂಖ್ಯೆ 607 ಆಗಿರುವ ಗರ್ಭಿಣಿ ಮಹಿಳೆಯಲ್ಲಿ ಭಾನುವಾರವಷ್ಟೇ ಸೋಂಕು ದೃಢಪಟ್ಟಿತ್ತು. 5 ತಿಂಗಳ ಗರ್ಭಿಣಿಯಾಗಿರುವ ಮಹಿಳೆ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿಂದೆ ಸೋಂಕಿತ ಮಹಿಳೆ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಅಲ್ಲಿಂದ ಗದಗ ಜಿಲ್ಲೆಯ ಕೃಷ್ಣಾಪುರ ಗ್ರಾಮದಲ್ಲಿರುವ ತನ್ನ ಪೋಷಕರ ಮನೆಗೂ ತೆರಳಿದ್ದರು. ಇದಾದ ಎರಡು ವಾರಗಳ ಬಳಿಕ ಮತ್ತೆ ಬಾಗಲಕೋಟೆಯ ದಿನಕಸಿರೂರುನಲ್ಲಿರುವ ಅತ್ತೆ ಮನೆಗೆ ಬಂದಿದ್ದರು. 

ನಂತರ ಉಸಿರಾಟ ಸಮಸ್ಯೆ ಇದೆ ಎಂದು ಹೇಳಿ ಮತ್ತೆ 3 ಆಸ್ಪತ್ರೆಗಳಿಗೆ ಮಹಿಳೆ ಭೇಟಿ ನೀಡಿದ್ದಾರೆ. ಈ ವೇಳೆ ಮಹಿಳೆಗೆ ಕೊರೋನಾ ವೈರಸ್ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ವೈರಸ್ ದೃಢಪಟ್ಟಿದೆ. ಇದೀಗ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆ ನಾಲ್ವರು ವೈದ್ಯರನ್ನು ಕ್ವಾರಂಟೈನ್ ನಲ್ಲಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. 

ಮಹಿಳೆಯಲ್ಲಿ ವೈರಸ್ ದೃಢಪಟ್ಟ ಕೂಡಲೇ ಆಕೆಯ ಜೊತೆಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದವರನ್ನು ಕೂಡಲೇ ಕಂಡು ಹಿಡಿಯಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT