ರಾಜ್ಯ

ಲಾಕ್ ಡೌನ್ ಸಮಯದಲ್ಲಿ ಮಾಲೀಕರು ವೇತನ ನೀಡಲಿಲ್ಲವೇ, ವೇತನ ಕಡಿತ ಮಾಡಿದ್ದಾರೆಯೇ?: ಇಲ್ಲಿ ದೂರು ಸಲ್ಲಿಸಿ

Sumana Upadhyaya

ಬೆಂಗಳೂರು: ನೌಕರರಿಗೆ ಏಪ್ರಿಲ್ ತಿಂಗಳ ವೇತನ ನೀಡದವರು ಅಥವಾ ವೇತನ ಕಡಿತ ಮಾಡಿದವರಿಗೆ ಎಚ್ಚರಿಕೆ ಕಾದಿದೆ.
ಉದ್ಯಮವಾಗಿರಲಿ ಅಥವಾ ಕೈಗಾರಿಕೆಗಳಾಗಿರಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ನೌಕರರಿಗೆ ಸಂಪೂರ್ಣ ವೇತನವನ್ನು ಮಾಲೀಕರು ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಪಾವತಿ ಮಾಡಬೇಕೆಂದು ಆದೇಶ ಹೊರಡಿಸಿದೆ.

ಒಂದು ವೇಳೆ ವೇತನ ನೀಡದಿದ್ದರೆ ಯಾವ ಕಾರಣಕ್ಕಾಗಿ ವೇತನ ಕಡಿತ ಮಾಡಲಾಗಿದೆ ಅಥವಾ ನೀಡಿಲ್ಲ ಎಂದು ಮಾಲೀಕರು ವಿವರಣೆ ನೀಡುವಂತೆ ಕೋರಿ ರಾಜ್ಯ ಸರ್ಕಾರ ಶೋಕಾಸ್ ನೊಟೀಸ್ ಜಾರಿ ಮಾಡಲಿದೆ. ಆದರೆ ಈ ನಿಯಮ ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರಿಗೆ ಮತ್ತು ನ್ಯಾಯಾಲಯದಿಂದ ಕೆಲಸಗಾರರು ಎಂದು ಘೋಷಿಸಲ್ಪಟ್ಟ ನೌಕರರಿಗೆ ಮಾತ್ರ ಅನ್ವಯವಾಗಲಿದೆ.

ವೇತನ ಕಡಿತ ಮಾಡಿದ್ದರೆ ಅಥವಾ ಮಾಲೀಕರು ಸಂಬಳ ನೀಡದಿದ್ದರೆ ನೌಕರರು www.dasoha2020.comನಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು. ತಮ್ಮಲ್ಲಿ ಹಣವಿಲ್ಲ, ಜೀವನ ನಿರ್ವಹಣೆಗೆ ಕಷ್ಟವಾಗುತ್ತದೆ ಎಂದು ನೌಕರರು ಸಾಬೀತುಪಡಿಸಬೇಕು ಎಂದು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ತಿಳಿಸಿದ್ದಾರೆ.

SCROLL FOR NEXT