ರಾಜ್ಯ

ಕೊರೋನಾ ಎಫೆಕ್ಟ್: 45 ದಿನಗಳ ಅಜ್ಞಾತವಾಸದ ಬಳಿಕ ಕೊನೆಗೂ ತವರಿಗೆ ಮರಳುತ್ತಿರುವ ಕನ್ನಡಿಗರು

Manjula VN

ಬೆಳಗಾವಿ: ಕೊರೋನಾ ಲಾಕ್'ಡೌನ್ ನಿಂದಾಗಿ ಕಳದೆದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ 45 ದಿನಗಳಿಂದ ಅಜ್ಞಾತವಾಸ ಅನುಭವಿಸಿದ್ದ ಕನ್ನಡಿಗರು ಕೊನೆಗೂ ತವರಿಗೆ ಮರಳುತ್ತಿದ್ದಾರೆ. 

ಸಾವಿರಾರು ಕನ್ನಡಿಗರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಮಂಡಲಿ ಗಡಿಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. 

ಗೋವಾದ ಕಣಕುಂಬಿ ಹಾಗೂ ಮಹಾರಾಷ್ಟ್ರ ರಾಜ್ಯದ ಕುಗ್ನೊಳಿ ಗಡಿಯಲ್ಲಿ ವಲಸಿಗ ಕಾರ್ಮಿಕರ ಪರೀಕ್ಷಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಗೋವಾದಿಂದ ಸಾವಿರಾಗು ಕನ್ನಡಿಗರು ಗಡಿಯತ್ತ ಧಾವಿಸಿದ್ದು, ನಾಲ್ಕು ಸ್ಟಾಲ್ ಗಳಲ್ಲಿ 250 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಪರಿಶೀಲನೆ ಜೊತೆಗೆ ಅವರ ದಾಖಲೆಗಳನ್ನು ಪರಿಶೀಲಿಸುವ ಕಾರ್ಯಗಳು ಕೂಡ ನಡೆಯುತ್ತಿವೆ. 

ಗಡಿಯಲ್ಲಿ ಎರಡೂ ರಾಜ್ಯಗಳಿಂದ ತೆರಳುವ ಕಾರ್ಮಿಕರನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಕೋವಿಡ್-19 ಮಾರ್ಗಸೂಚಿಗಳನ್ನು ಎರಡೂ ರಾಜ್ಯಗಳೂ ಅನುಸರಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮಹಾರಾಷ್ಟ್ರ ರಾಜ್ಯದ ಹಲವು ಜಿಲ್ಲೆಗಳಲ್ಲಿ ರಾಜ್ಯದ ಸಾವಿರಾರು ವಲಸಿಗರು ಹಾಗೂ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಕರ್ನಾಟಕಕ್ಕೆ ವಲಸಿಗರು ಬರುತ್ತಿರುವ ಕುರಿತು ಗೋವಾ ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿಗಳನ್ನೂ ನೀಡಿಲ್ಲ. 20,000 ವಲಸಿಗರು ರಾಜ್ಯಕ್ಕೆ ಆಗಮಿಸುವ ಕುರಿತು ಗೋವಾದಲ್ಲಿ ದಾಖಲು ಮಾಡಿದ್ದಾರೆಂದು ಹೇಳಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಗೋವಾ ಆಡಳಿತ ಮಂಡಳಿಯ ದೃಢೀಕರಣಕ್ಕಾಗಿ ರಾಜ್ಯ ಸರ್ಕಾರ ಕಾಯುತ್ತಿದೆ. ವೈದ್ಯಕೀಯ ಪರೀಕ್ಷೆಗಳ ಬಳಿಕ ಆಯಾ ಪ್ರದೇಶಗಳ ಜನರನ್ನು ಅವರ ಸ್ಥಳಕ್ಕೆ ತಲುಪಿಸಲು ಅಧಿಕಾರಿಗಳನ್ನು ಜೊತೆಗೆ ಕಳುಹಿಸಲಾಗುತ್ತದೆ. ವಲಸಿಗರ ತಲುಪಿಸಲು ಅಧಿಕಾರಿಗಳು ಈಗಾಗಲೇ ಸಾರಿಗೆ ವ್ಯವಸ್ಥೆಗಳನ್ನೂ ಕೂಡ ಮಾಡುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT