ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ 
ರಾಜ್ಯ

ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ: ಡಿ.ವಿ. ಸದಾನಂದ ಗೌಡ

ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು, ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಬೆಂಗಳೂರು: ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು, ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಫ್ಲೈಟ್‌ ನಂ-ಐಎಕ್ಸ್‌ 0384 ವಿಮಾನ ದುಬೈಯಿಂದ 16.10ಕ್ಕೆ ಹೊರಟು ಮಂಗಳೂರಿಗೆ 21.10ಕ್ಕೆ ತಲುಪಲಿದೆ ಎಂದಿದ್ದಾರೆ. 

ಲಾಕ್‌ ಡೌನ್‌ನಿಂದಾಗಿ ವಿದೇಶದಲ್ಲಿ ಉಳಿದಿರುವ ಭಾರತೀಯರನ್ನು ಭಾರತಕ್ಕೆ ಕರೆ ತರಲು ಏರ್ ಇಂಡಿಯಾ ವಿಮಾನವು ಮೇ 14 ರಂದು ಸಂಜೆ 4:10 ದುಬೈಯಿಂದ ಹೊರಡಲಿದ್ದು, ಮಂಗಳೂರಿಗೆ ರಾತ್ರಿ 9:10 ಕ್ಕೆ ಆಗಮಿಸಲಿದೆ ಎಂದು ಈ ಮೊದಲು ತಿಳಿಸಲಾಗಿತ್ತು.

 ಆದರೆ ಇದೀಗ ಎರಡು ದಿನ ಮೊದಲು ಈ ವಿಮಾನ ಹೊರಡಲಿದೆ. ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು, ಹಿರಿಯರಿಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ವಿಮಾನದಲ್ಲಿ ಆಗಮಿಸಲಿರುವ ಪ್ರಯಾಣಿಕರಲ್ಲಿ ಮಂಗಳೂರಿನವರಿಗೆ ಮಂಗಳೂರಿನಲ್ಲಿಯೇ ಕ್ವಾರಂಟೈನ್ ಮಾಡಲಾಗುವುದು. ಉಳಿದಂತೆ ಉಡುಪಿ ಜಿಲ್ಲೆಯ ಹಾಗು ಕೇರಳ ಭಾಗದ ಜನರಿಗೆ ಅವರ ಭಾಗದಲ್ಲಿಯೇ ಕ್ವಾರಂಟೈನ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಲುದಾರಿಯಲ್ಲಿ ನಡೆಯುವ ಹಕ್ಕಿಗೆ ಮೂಲಭೂತ ಹಕ್ಕಿನ ಮಾನ್ಯತೆ ಸಿಗುವುದಾದರೆ, ಮತದಾನದ ಹಕ್ಕಿಗೆ ಯಾಕಿಲ್ಲ?; ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

'ಕೈ' ಪಡೆಗೆ ಹೊಸ ನಾಯಕತ್ವ; KPCC ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ..!

Cricket: ಇಂಗ್ಲೆಂಡ್ ಪ್ರವಾಸಕ್ಕೆ 'ಬಲಿಷ್ಟ ಭಾರತ'; ಏಕದಿನ ತಂಡ ಪ್ರಕಟ, ಕೊಹ್ಲಿ, ಬುಮ್ರಾ ವಾಪಸ್, ಬ್ರಾರ್ ಗೂ ಅವಕಾಶ

NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಆಕ್ರೋಶ: ಜಂತರ್ ಮಂತರ್‌ನಲ್ಲಿ ಮುಂದುವರೆದ Cockroach Janta Party ಪ್ರತಿಭಟನೆ; 'ನ್ಯಾಯ ಸಿಗುವವರೆಗೂ ಹಿಂದೆ ಸರಿಯಲ್ಲ'- ದೀಪ್ಕೆ ಘೋಷಣೆ

ರಕ್ಷಣಾ ಕ್ಷೇತ್ರದಲ್ಲಿ ಭಾರತ ಇನ್ನು ಮುಂದೆ ಕೇವಲ ಖರೀದಿದಾರ ರಾಷ್ಟ್ರವಾಗಿ ಉಳಿಯಲ್ಲ: ಪ್ರಧಾನಿ ಮೋದಿ