ರಾಜ್ಯ

ಉ.ಪ್ರ ಮಾದರಿಯಲ್ಲಿ ಕರ್ನಾಟಕವೂ ತರಲಿದೆಯೇ ಕಾರ್ಮಿಕ ಕಾನೂನಿಗೆ ತಿದ್ದುಪಡಿ?ಮಾತುಕತೆ ಹಂತದಲ್ಲಿ ಇಲಾಖೆ

Sumana Upadhyaya

ಬೆಂಗಳೂರು:ಸಂಬಂಧಪಟ್ಟವರೊಂದಿಗೆ ಚರ್ಚೆ, ಸಮಾಲೋಚನೆ ನಡೆಸಿ ಈಗಿರುವ ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡಲು ರಾಜ್ಯ ಕಾರ್ಮಿಕ ಇಲಾಖೆ ಚಿಂತನೆ ನಡೆಸುತ್ತಿದೆ.

ಕರ್ನಾಟಕದಲ್ಲಿರುವ ಕೈಗಾರಿಕೆಗಳು ಉತ್ತರ ಪ್ರದೇಶದ ಮಾದರಿಯನ್ನು ಬಯಸುತ್ತಿದ್ದು, ಅದಕ್ಕಿಂತಲೂ ಉತ್ತಮವಾದ ಕೈಗಾರಿಕಾ ನೀತಿಯನ್ನು ಜಾರಿಗೆ ತರಲು ಯೋಜನೆಗಳು ನಡೆಯುತ್ತಿವೆ ಎಂದು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಪಿ ತಿಳಿಸಿದ್ದಾರೆ.

ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಿ ಭದ್ರಪಡಿಸಲು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮುಂದಿನ ಮೂರು ವರ್ಷಗಳಿಗೆ ಬಹುತೇಕ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸುವ ವಿಧೇಯಕಕ್ಕೆ ಒಪ್ಪಿಗೆ ನೀಡಿತ್ತು. ಕರ್ನಾಟಕ ಸರ್ಕಾರ ಕೂಡ ಲಾಕ್ ಡೌನ್ ಮುಗಿದ ನಂತರ ಆರ್ಥಿಕತೆಯ ಬೆಳವಣಿಗೆಗೆ ಹಲವು ಆಯ್ಕೆಗಳನ್ನು ಪರೀಕ್ಷಿಸುತ್ತಿದೆ.

ಈ ಬಗ್ಗೆ ಮಾಹಿತಿ ನೀಡಲು ಸದ್ಯ ಸಂಬಂಧಪಟ್ಟ ಪಾಲುದಾರರೊಂದಿಗೆ ಮಾತುಕತೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ವ್ಯಾಪಾರ ಸಂಘಟನೆಗಳು ಮತ್ತು ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಮಣಿವಣ್ಣನ್ ಹೇಳಿದರು.ಏಪ್ರಿಲ್ ತಿಂಗಳ ವೇತನ ನೀಡದ ಅಥವಾ ಕಡಿತ ಮಾಡಿದ ಮಾಲೀಕರಿಗೆ ನೊಟೀಸ್ ಹೊರಡಿಸುವ ಬಗ್ಗೆ ಕೇಳಿದಾಗ ಈ ವಿಷಯವನ್ನು ಕೈಗಾರಿಕಾ ಒಕ್ಕೂಟ, ವ್ಯಾಪಾರ ಒಕ್ಕೂಟ ಮತ್ತು ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ಮುಂದಿಡಲಾಗಿದೆ. ಇದುವರೆಗೆ ನೊಟೀಸ್ ಜಾರಿ ಮಾಡಿಲ್ಲ ಎಂದರು.

SCROLL FOR NEXT