ರಾಜ್ಯ

ವಂದೇ ಭಾರತ್ ಮಿಷನ್ : ದುಬೈನಿಂದ ಮಂಗಳೂರಿಗೆ ಆಗಮಿಸಿದ 177 ಕನ್ನಡಿಗರು

Shilpa D

ಮಂಗಳೂರು: ಕೋವಿಡ್ 19 ಕಾರಣದಿಂದ ದುಬೈನಲ್ಲಿ ಸಿಲುಕಿಕೊಂಡಿದ್ದ 177 ಕನ್ನಡಿಗರನ್ನು ಒಳಗೊಂಡ ವಿಮಾನ ಮಂಗಳವಾರ ತಡರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ.

ಈ ಮೂಲಕ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ಏರ್‌ಲಿಫ್ಟ್‌ ಮಾಡುವ ಬಹುನಿರೀಕ್ಷಿತ ‘ವಂದೇ ಭಾರತ್‌’ ಯೋಜನೆಯಡಿ ಮಂಗಳೂರಿಗೆ ಮೊದಲ ವಿಮಾನ ಆಗಮಿಸಿದಂತಾಗಿದೆ.

ದ.ಕ. ಜಿಲ್ಲೆಯ 96, ಉಡುಪಿ ಜಿಲ್ಲೆಯ 49 ಹಾಗೂ ಇತರ ಜಿಲ್ಲೆಗಳ 31 ಪ್ರಯಾಣಿಕರಿದ್ದರು. ಅವರಲ್ಲಿ 38 ಗರ್ಭಿಣಿಯರು, ವೈದ್ಯಕೀಯ ಚಿಕಿತ್ಸೆ ಪಡೆಯುವ ನಿರೀಕ್ಷೆಯಲ್ಲಿರುವವರು, ದುಬೈಯಲ್ಲಿ ಕೆಲಸ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ಕುಟುಂಬ ಮೆಡಿಕಲ್‌ ಅಗತ್ಯ ಇರುವವರು, ಪ್ರವಾಸಕ್ಕೆ ಹೋಗಿ ಬಾಕಿಯಾದವರು ಸೇರಿದ್ದಾರೆ.

ಮಂಗಳವಾರ ಮಧ್ಯಾಹ್ನ ಮಂಗಳೂರಿನಿಂದ ದುಬೈಗೆ ತೆರಳಿದ್ದ ಖಾಲಿ ವಿಮಾನವು ರಾತ್ರಿ 7 ಗಂಟೆಗೆ ಪ್ರಯಾಣಿಕರೊಂದಿಗೆ ಹೊರಟು ತಡರಾತ್ರಿ ಮರಳಿ ಬಂದಿತು. ಇಳಿದ ತತ್‌ಕ್ಷಣವೇ ಜಿಲ್ಲಾ ವೈದ್ಯಾಧಿಕಾರಿಗಳ ತಂಡವು ವಿಶೇಷ ಪಿಇಪಿ ಕಿಟ್‌ ಧರಿಸಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿತು.

ಪ್ರಯಾಣಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು, ಮಂಗಳೂರು ಜಿಲ್ಲಾಡಳಿತ  ಪ್ರಯಾಣಿಕರಿಗೆ ಎಲ್ಲಾ ರೀತಿಯ ಆಗತ್ಯ ನೆರವು ಒದಗಿಸಿತ್ತು

SCROLL FOR NEXT