ರಾಜ್ಯ

ರಾಜಸ್ತಾನಕ್ಕೆ ಹೊರಟ ಟ್ರಕ್ ನಲ್ಲಿ ಕುರಿಗಳಂತೆ ತುಂಬಿದ್ದ ವಲಸೆ ಕಾರ್ಮಿಕರು: ಲಾರಿಯಲ್ಲಿ 101 ಮಂದಿ ಪತ್ತೆ!

Shilpa D

ಬೆಂಗಳೂರು: ಮಂಗಳವಾರ ತಡರಾತ್ರಿ ಟೋಲ್ ಪ್ಲಾಜಾದಲ್ಲಿ  ನೂರಾರು ಮಂದಿ ವಲಸೆ ಕಾರ್ಮಿಕರು ತುಂಬಿದ್ದ ಲಾರಿ ಕಂಡು ಬಂದಿತ್ತು, ಲಾರಿಯಲ್ಲಿ  ಟಾರ್ಪಾಲಿನ್ ಕೆಳಗೆ 101 ಮಂದಿ ವಲಸೆ ಕಾರ್ಮಿಕರು ಇದ್ದರು.

ಬೆಂಗಳೂರಿನಿಂದ ರಾಜಸ್ತಾನದ ಜೋಧ್ ಪುರಕ್ಕೆ  ಹೊರಟ ಲಾರಿಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಕುರಿಗಳಂತೆ ತುಂಬಿಕೊಂಡಿದ್ದರು.

ಹಲವು ದಿನಗಳ ಲಾಕ್ ಡೌನ್ ನಿಂದಾಗಿ ನಿರಾಶೆಗೊಂಡಿದ್ದ ವಲಸೆ ಕಾರ್ಮಿಕರು, 1900 ಕಿಮೀ ಪ್ರಯಾಣ ಬೆಳೆಸಲು  ಮಾಗಡಿ ರಸ್ತೆಯಿಂದ ಹೊರಟ ಲಾರಿಯಲ್ಲಿ ತುಂಬಿದ್ದರು.

ಜೋಧಪುರವನ್ನು ತಲುಪಲು. ಬೆಳಗಾವಿ ಜಿಲ್ಲೆಯ ಹಿರೆಬಾಗೇವಾಡಿಯಲ್ಲಿರುವ ಎನ್‌ಎಚ್ -4 ಪ್ಲಾಜಾದಲ್ಲಿ ಸಿಕ್ಕಿಬೀಳುವ ಹೊತ್ತಿಗೆ ಅವರು ಐದು ಜಿಲ್ಲೆಗಳನ್ನು ದಾಟಿದ್ದರು ಹಾಗೂ ಇನ್ನೂ ಎರಡು ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ದಾಟಿದ್ದರೇ ಮಹಾರಾಷ್ಟ್ರ ತಲುಪುತ್ತಿದ್ದರು.

ಪೊಲೀಸರು ಟಾರ್ಪಾಲಿನ್ ತೆರೆದು ನೋಡಿದಾಗ ಅದರಲ್ಲಿ ಕಾರ್ಮಿಕರು ಕುರಿಗಳಂತೆ ಒಬ್ಬರ ಮೇಲೋಬ್ಬರು ಕುಳಿತಿದ್ದರು.  ಹೀರೇಬಾಗೇವಾಡಿಯಲ್ಲಿ ಅವರನ್ನೆಲ್ಲಾ ವಶಕ್ಕೆ ತೆಗೆದುಕೊಂಡು ಜಿಲ್ಲಾಡಳಿತ, ಅವರಿಗೆ ವೈದ್ಯಕೀಯ ಚಿಕಿತ್ಸೆ ನಡೆಸಿ, ಅವರನ್ನೆಲ್ಲಾ ಕ್ವಾರಂಟೈನ್ ಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ,

ಕ್ವಾರಂಟೈನ್ ತಪ್ಪಿಸಿಕೊಳ್ಳಲು ಈ ವಲಸೆ ಕಾರ್ಮಿಕರು  ಲಾರಿಯಲ್ಲಿ ಹೊರಟಿದ್ದರು, 400 ಕಾರ್ಮಿಕರನ್ನು ಗುರುವಾರ ರೈಲಿನಲ್ಲಿ ಕಳುಹಿಸಿಕೊಡಲಾಗುವುದು ಎಂದು ಡಿಸಿಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

SCROLL FOR NEXT