ಸಂಗ್ರಹ ಚಿತ್ರ 
ರಾಜ್ಯ

ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಕೊಂದು ಶವದೊಡನೆ ಎರಡು ದಿನ ಕಳೆದ ಪತಿ ಆತ್ಮಹತ್ಯೆ!

ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಎರಡು ದಿನಗಳ ಬಳಿಕ ಸಂಬಂಧಿಗಳಿಗೆ ಸುದ್ದಿ ತಿಳಿಯುತ್ತಿದ್ದಂತೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು: ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಎರಡು ದಿನಗಳ ಬಳಿಕ ಸಂಬಂಧಿಗಳಿಗೆ ಸುದ್ದಿ ತಿಳಿಯುತ್ತಿದ್ದಂತೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಸಂದ್ಯಾ ಎಂಬಾಕೆ ಕೊಲೆಯಾಗಿರುವ ಮಹಿಳೆ. ಈಕೆಯ ಪತಿ ಮನೀಷ್ ಕುಮಾರ್ ಎಂಬಾತನೇ ಸಂದ್ಯಾಳನ್ನು ಕೊಂದು ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ವಿವರ 

ಮೃತ ಸಂದ್ಯಾ ಹಾಗೂ ಮನೀಷ್ ಕುಮಾರ್

ಖಾಸಗಿ ಕಾರ್ಖಾನೆಯ ಮ್ಯಾನೇಜರ್​ ಆಗಿದ್ದ ಮನೀಷ್ ಕುಮಾರ್ ಸಂದ್ಯಾಳನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಎರಡು ವರ್ಷಗಳ ಹಿಂದೆ ಬಿಹಾರದಿಂದ ಬೆಂಗಳೂರಿಗೆ ಆಗಮಿಸಿದ್ದ ದಂಪತಿಗಳು ಕೂಡ್ಲು ಗೇಟ್ ನಲ್ಲಿ ಬಾಡಿಗೆ ಮನೆಯಲ್ಲಿದ್ದರು.  ಈ ನಡುವೆ ಮನೀಷ್ ಗೆ ಬೇರೊಬ್ಬ ಯುವತಿಯೊಡನೆ ಪರಿಚಯ, ಸ್ನೇಹ ಬೆಳೆದಿತ್ತು. ಇಬ್ಬರೂ ಅನೈತಿಕ ಸಾಂಬಂಧವನ್ನಿರಿಸಿಕೊಂಡಿದ್ದರು. ಈ ವಿಚಾರ ಪತ್ನಿ ಸಾಂದ್ಯಾಗೆ ತಿಳಿದು ಮನೆಯಲ್ಲಿ ಜಗಳ ಪ್ರಾರಂಬವಾಗಿದೆ. 

ಎರಡು ದಿನಗಳ ಹಿಂದೆ ಸಹ ಇದೇ ಕಾರಣಕ್ಕೆ ಜಗಳ ನಡೆಇದ್ದು ಮನೀಷ್ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಂದಿದ್ದು ಶವವನ್ನು ಮನೆಯಲ್ಲೇ ರಿಸಿಕೊಂಡು ತಾನೂ ಮನೆಯಲ್ಲಿದ್ದ. ಇತ್ತ ಸಂದ್ಯಾ ತವರು ಮನೆಯವರು ಕಳೆದ ಎರಡು ದಿನಗಳಿಂದ ಆಕೆಯ ಕರೆ ಬಾರದ ಹಿನ್ನೆಲೆಯಲ್ಲಿ ಕರೆ ಮಾಡಿದ್ದಾರೆ. ಆದರೆ ಆಕೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಆಕೆಯ ಪ್ರತಿಕ್ರಿಯೆ ಬಾರದ ಕಾರಣ ಗಾಬರಿಗೊಂಡ ಅವರು ಮನೆಗೆ ಹುಡುಕಿ ಬಂದಿದ್ದಾರೆ.  ಆದರೆ ಸಂದ್ಯಾ ಮನೆಯವರಿಗೆ ವಿಚಾರ ತಿಳಿದು ಅನಾಹುತವಾಗಿದೆ ಎಂದರಿತ ಮನೀಷ್ ತಾನೂ ವಿಚಲಿತನಾಗಿ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಸಧ್ಯ ಪರಪ್ಪನ ಅಗ್ರಹಾರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video