ರಾಜ್ಯ

ಉಡುಪಿಯಲ್ಲಿ ಕೊರೋನಾಗೆ ಮೊದಲ ಬಲಿ! ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ನಿಧನ

Raghavendra Adiga

ಉಡುಪಿ: ಕ್ವಾರಂಟೈನ್‌ನಲ್ಲಿದ್ದ 54 ವರ್ಷದ ವ್ಯಕ್ತಿಯೊಬ್ಬರುಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿ ವರದಿ ಪರಿಶೀಲಿಸಲಾಗಿ ಮೃತ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.  ಉಡುಪಿ ಜಿಲ್ಲೆಯಲ್ಲಿ ಇದು ಮೊದಲ ಕೊರೋನಾ ಸಾವಿನ ಪ್ರಕರಣವಾಗಿದೆ. 

ಮಹಾರಾಷ್ಟ್ರದಿಂದ ತನ್ನ ಹುಟ್ಟೂರಾದ ಕುಂದಾಪುರ ತಾಲೂಕಿಗೆ ಮೇ 13ರಂದು ಆಗಮಿಸಿದ್ದ ಅವರು, ಎದೆನೋವಿಗಾಗಿ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನೋವು ಉಲ್ಬಣಿಸಿದ ಕಾರಣ ಅವರನ್ನು ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ 14ರ ಬೆಳಗ್ಗೆ ನಿಧನ ಹೊಂದಿದ್ದಾಗಿ ತಿಳಿದುಬಂದಿದೆ.

ಇದೀಗ ವ್ಯಕ್ತಿಗೆ ಕೊರೋನಾ ಇರುವುದು ಸಾಬೀತಾಗಿದ್ದು "ಚಿಕಿತ್ಸೆಯ ಸಮಯದಲ್ಲಿ ರೋಗಿಯೊಂದಿಗೆ ಸಂಪರ್ಕದಲ್ಲಿದ್ದ ಕೆಲವು ಸಿಬ್ಬಂದಿಯನ್ನು ಕ್ವಾರಂತೈನ್ ಗೆ ಒಳಪಡಿಸಲಾಗುವುದುಸ್ಪತ್ರೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುರ್ತು ವಿಭಾಗವು ತೆರೆದಿರುರಲಿದೆ. ಒಪಿಡಿ ಸೌಲಭ್ಯವೂ ಎಂದಿನಂತೆ ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 1 ರವರೆಗೆ ತೆರೆದಿರುತ್ತದೆ ”ಎಂದು ಕೆಎಂಸಿ ಮಣಿಪಾಲ್ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿದರು.

SCROLL FOR NEXT