ರಾಜ್ಯ

ಕೋಲಾರ: ಚಿನ್ನದ ಅದಿರು ಕದ್ದ ಕಳ್ಳನಿಗೂ ಕೊರೋನಾ ಪಾಸಿಟಿವ್!

Raghavendra Adiga

ಕೆಜಿಎಫ್: ಭಾರತ್ ಗೋಲ್ಡ್ ಮೈನ್ ಲಿಮಿಟೆಡ್ (ಬಿಜಿಎಂಎಲ್) ನ ಸ್ಥಗಿತಗೊಂಡ ಗಣಿಯಿಂದ ಚಿನ್ನದ ಅದಿರು ಕಳ್ಲತನ ಮಾಡಿದ್ದ ಆರೋಪಿಗೆ ಕೊರೋನಾ ದೃಢಪಟ್ಟಿದೆ.

ಪ್ರಸ್ತುತ ಕೆಜಿಎಫ್ ಉಪ ಕಾರಾಗೃಹದಲ್ಲಿರುವ ರೋಗಿಯನ್ನು ಕೋಲಾರದ ನಿಗದಿತ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ಹೇಳಿದೆ.

ಬುಧವಾರ ರಾತ್ರಿ ಮಾರಿಕುಪ್ಪಂನ ವ್ಯಾಪ್ತಿಯಲ್ಲಿನ ಸ್ಥಗಿತವಾಗಿರುವ ಮೈಸೂರು ಗಣಿಗಳ ಹ್ಯಾನ್‌ಕಾಕ್ ಮೈನ್‌ನಲ್ಲಿ ಚಿನ್ನದ ಅದಿರಿನ ಕಳ್ಳತನ ನಡೆದಿದ್ದು ಈ ವ್ಯಕ್ತಿ ಇತರೆ ನಾಲ್ವರೊಂದಿಗೆ ಈ ಕೃತ್ಯದಲ್ಲಿ ಭಾಗವಹಿಸಿದ್ದ. ಈ ವೇಳೆ ಆತನ ಮೂವರು ಸಹಚರರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಆದರೆ ಈ ವ್ಯಕ್ತಿ ಹಾಗೂ ಇನ್ನೋರ್ವನನ್ನು ಪೋಲೀಸರು ಬಂಧಿಸಿದ್ದರು.

ಇನ್ನು ಕೋವಿಡ್ ಸೋಂಕಿತ ಆರೋಪಿಯ ವಿಚಾರಣೆ ನಡೆಸುವ ವೇಳೆ ಪೋಲೀಸರು ಮುಂಜಾಗ್ರತೆಯಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಬಳಿಕ ಆತನಿಗೆ ತುರ್ತು ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಆದರೆ ಅಲ್ಲಿ ಆರೋಪಿಗೆ ಕೊರೋನಾ ಇಲ್ಲವೆಂದು ವರದಿ ಬಂದಿತ್ತು. ಮತ್ತೊಮ್ಮೆ ಆತನ ಸ್ವ್ಯಾಬ್ ಅನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಯಿತು, ಈ ದಿನ (ಭಾನುವಾರ) ಅದರ ವರದಿ ಬಂದಿದ್ದು ಆರೋಪಿತನಿಗೆ ಕೊರೋನಾ ಇರುವುದು ಸಾಬೀತಾಗಿದೆ. ಆರೋಪಿ ಕೆಜಿಎಫ್ ಸಬ್ ಜೈಲಿನಲ್ಲಿದ್ದಾಗ ಆತನ ಸ್ವ್ಯಾಬ್ ಸಂಗ್ರಹವನ್ನು ನಡೆಸಿದ್ದು ಆತನಿಗೆ ಪ್ರತ್ಯೇಕ ಕೋಣೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಜಿಲ್ಲೆಯಲ್ಲಿ ಕರೋನವೈರಸ್ ಹರಡಿದ ನಂತರ, ಬಂಧನ ಕಾರ್ಯವಿಧಾನಗಳನ್ನು ಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಡನೆ ಕೈಗೊಳ್ಲಲಾಗುತ್ತಿದೆ. ಸಾಮಾಜಿಕ  ಅಂತರವನ್ನು ಕಾಪಾಡಿಕೊಂಡು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಹೀಗಾಗಿ ಯಾವುದೇ ಪೊಲೀಸರು ಅಥವಾ ಅಧಿಕಾರಿಗಳಿಗೆ ವೈರಸ್ ಹರಡುವ ಸಾಧ್ಯತೆ ಇಲ್ಲ. ರೋಗಿಗೆ ಪ್ರಯಾಣದ ಇತಿಹಾಸವಿಲ್ಲ ಆದರೆ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಕೋಲಾರದಲ್ಲಿ  ಇನ್ನೂ ಎರಡು ಪ್ರಕರಣಗಳು ವರದಿಯಾಗಿವೆ. ಒಬ್ಬ ವ್ಯಕ್ತಿ ಮಾಲೂರು ಮೂಲದವನಾಗಿದ್ದರೆ ಇನ್ನೋರ್ವ ಮುಲಬಾಗಿಲಿನವನಾಗಿದ್ದಾನೆ. . ಈ ಎರಡೂ ಪ್ರಕರಣಗಳು ಆರೋಗ್ಯ ಇಲಾಖೆಯ ಪ್ರಕಾರ ಚೆನ್ನೈಗೆ ಪ್ರಯಾಣಿಸಿದ ಇತಿಹಾಸವನ್ನು ಹೊಂದಿವೆ.
 

SCROLL FOR NEXT