ವಶಕ್ಕೆ ಪಡೆಯಲಾದ ಟ್ರಕ್ ಗಳು 
ರಾಜ್ಯ

ಧಾರವಾಡ: ಕಾಸರಗೋಡು, ಮಂಗಳೂರಿನ 74 ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಲಾರಿಗಳ ವಶ

ಮಂಗಳೂರು ಮತ್ತು ಕಾಸರಗೋಡಿನಿಂದ 74 ವಲಸೆ ಕಾರ್ಮಿಕರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗದಗ ಪೋಲೀಸರು ವಶಪಡಿಸಿಕೊಂಡಿದ್ದಾರೆ 

ಧಾರವಾಡ: ಮಂಗಳೂರು ಮತ್ತು ಕಾಸರಗೋಡಿನಿಂದ 74 ವಲಸೆ ಕಾರ್ಮಿಕರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗದಗ ಪೋಲೀಸರು ವಶಪಡಿಸಿಕೊಂಡಿದ್ದಾರೆ

ಈ ಟ್ರಕ್‌ಗಳಲ್ಲಿ 27 ವಲಸೆ ಕಾರ್ಮಿಕರು ಕಾಸರಗೋಡಿನವರಾದರೆ 47 ಮಂದಿ ಮಂಗಳೂರಿನಿಂದ ಬಂದಿದ್ದರು. ಅವರನ್ನು ರಾಜಾಸ್ಥಾನಕ್ಕೆ ಕರೆದೊಯ್ಯಲಾಗುತ್ತಿತ್ತು. ಗದಗ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿ ಪರಿಶೀಲಿಸಿದಾಗ, ಲಾರಿಗಳು ಜನರನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ನೋಂದಣಿ ಸಂಖ್ಯೆ RJ 14 BJ 2909 ಮತ್ತು HR 46 CS 703 ಟ್ರಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರು ಧಾರವಾಡದ ಪಟ್ಟಣಶೆಟ್ತಿ ಮದುವೆ ಮಂಟಪದಲ್ಲಿ ವಲಸೆ ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

ಎರಡೂ ಟ್ರಕ್ ಚಾಲಕರ ವಿರುದ್ಧ ದೂರು ದಾಖಲಿಸಲಾಗಿದೆ. ಎಲ್ಲ ಕಾರ್ಮಿಕರನ್ನು ರಾಜಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮತ್ತ ಎಷ್ಟೇ ಬೆರಳು ತೋರಿದರೂ, ಅಲ್ಪಸಂಖ್ಯಾತರ ಮೇಲೆ ನಿಮ್ಮ ದೌರ್ಜನ್ಯ ಮುಚ್ಚಿಡಲು ಸಾಧ್ಯವಿಲ್ಲ- ಪಾಕ್ ಗೆ ಭಾರತದ ತಿರುಗೇಟು!

ಅನಧಿಕೃತ ಮನೆಗಳ ತೆರವು: ಕೋಗಿಲು ಲೇಔಟ್​​ಗೆ ಡಿ.ಕೆ ಶಿವಕುಮಾರ್ ಭೇಟಿ; ಡಿಸಿಎಂ ಹೇಳಿದ್ದೇನು? Video

ಬೆಂಗಳೂರು: ಕಿರುತೆರೆ ನಟಿ ನಂದಿನಿ ಆತ್ಮಹತ್ಯೆಗೆ ಶರಣು

ಮಾದಕ ವಸ್ತು ತಡೆ: ನಿರ್ಲಕ್ಷ್ಯಕ್ಕಾಗಿ ಮೂವರು ಇನ್ಸ್‌ಪೆಕ್ಟರ್‌ಗಳ ಅಮಾನತು

ಲಂಕಾ ಹನಿಮೂನ್ ನಲ್ಲಿ 'ಹಳೇ ಲವರ್' ವಿಚಾರಕ್ಕೆ ಜಗಳ! ನವದಂಪತಿ ಸೂಸೈಡ್ ಗೆ ಇದೇ ಕಾರಣನಾ? ಕಣ್ಣೀರಿನಲ್ಲಿ ಮುಳುಗಿದ ಕುಟುಂಬ!

SCROLL FOR NEXT