ಬೆಂಗಳೂರು: ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ 58 ದಿನ ಬಂದ್ ಆಗಿದ್ದ ನಗರದ ಸಲೂನ್, ಪಾರ್ಲರ್'ಗಳು ಮಂಗಳವಾರ ಎಂದಿನಂತೆ ತನ್ನ ಕಾರ್ಯಗಳನ್ನು ಆರಂಭಿಸಿವೆ. ಈ ನಡುವಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿರುವ ಸರ್ಕಾರ ಸಲೂನ್ ಹಾಗೂ ಪಾರ್ಲರ್ ಗಳಿಗೆ ನಿಯಮಗಳನ್ನು ವಿಧಿಸಿದೆ.
ಹಲವು ಅಂಶಗಳುಳ್ಳ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ಅವುಗಳು ಇಂತಿವೆ...
- ಅಂಗಡಿ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಟ್ಟಿರಬೇಕು.
- ಅಂಗಡಿಯ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ತಲೆಗವಸು ಮತ್ತು ಎಪ್ರಾನ್ ಧರಿಸಬೇಕು.
- ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇರುವವರಿಗೆ ಅಂಗಡಿ ಪ್ರವೇಶಕ್ಕೆ ಅವಕಾಶ ನೀಡಬಾರದು.
- ಮಾಸ್ಕ್ ಧರಿಸದೆ ಬರುವ ಗ್ರಾಹಕರಿಗೆ ಪ್ರವೇಶ ನೀಡಬಾರದು.
- ಒಬ್ಬ ಗ್ರಾಹಕನಿಗೆ ಬಳಸಿದ ಟವಲ್, ಪೇಪರ್ ಶೀಟ್'ನ್ನು ಬೇರೊಬ್ಬರಿಗೆ ಬಳಸುವಂತಿಲ್ಲ.
- ಪ್ರತೀ ಗ್ರಾಹಕನಿಗೆ ಕ್ಷೌರ ಮಾಡಿದ ಬಳಿಕ ಸಿಬ್ಬಂದಿ ಹ್ಯಾಂಡ್ ವಾಷ್ ಮಾಡಿಕೊಳ್ಳಬೇಕು.
- ಒಬ್ಬ ಗ್ರಾಹಕನಿಗೆ ಬಳಸಿದ ವಸ್ತುಗಳನ್ನು ಮತ್ತೊಬ್ಬರಿಗೆ ಬಳಸುವುದಕ್ಕೂ ಮುನ್ನ ಶೇ.7ರಷ್ಟು ಲೈಸಾಲ್ ಹಾಗಿ 30 ನಿಮಿಷಗಳ ಕಾಲ ನೆನೆಸಿ ಶುದ್ಧ ಮಾಡಿದ ಬಳಿಕವಶ್ಟೇ ಬಳಕೆ ಮಾಡಬೇಕು.
- ಸಲೂನ್ ಹಾಗೂ ಪಾರ್ಲರ್ ಗಳು ಬಳಸುವ ವಸ್ತುಗಳನ್ನು ದ್ವಿಗುಣಗೊಳಿಸಿಕೊಳ್ಳಬೇಕು.
- ಗ್ರಾಹಕರಿಗೆ ಸಲೂನ್ ಹಾಗೂ ಪಾರ್ಲರ್ ಮಾಲೀಕರು ಟೋಕನ್ ಗಳನ್ನು ವಿತರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
- ಒಬ್ಬ ಗ್ರಾಹಕನಿಂದ ಮತ್ತೊಬ್ಬ ಗ್ರಾಹನಿಗೆ ಕನಿಷ್ಟ 1 ಮೀಟರ್ ಆದರೂ ಅಂತರವಿರಬೇಕು.
- ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ಬಳಕೆ ಮಾಡಿ ಸಲೂನ್, ಪಾರ್ಲರ್ ಗಳ ಎಲ್ಲಾ ಮಹಡಿಗಳು, ಲಿಫ್ಟ್ ಗಳು, ವಿಶ್ರಾಂತಿ ಪ್ರದೇಶಗಳು, ಮೆಟ್ಟಿಲುಗಳು ಮತ್ತು ಹ್ಯಾಂಡ್ರೈಲ್‌ಗಳನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಬೇಕು.