ರಾಜ್ಯ

ರಾಜ್ಯದ ಪಾಲಿನ 1,678.57 ಕೋಟಿ ರೂ. ತೆರಿಗೆ ಹಣ ನೀಡಿದ ಕೇಂದ್ರ ಸರ್ಕಾರ

Manjula VN

ಬೆಂಗಳೂರು: ಕೊರೋನಾ ಲಾಕ್'ಡೌನ್ ಸಂದರ್ಭದಲ್ಲಿದೇ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿದ್ದ ರೂ.1,678.57 ಕೋಟಿ ತೆರಿಗೆ ಹಣವನ್ನು ಬುಧವಾರ ಬಿಡುಗಡೆ ಮಾಡಿದೆ. 

ಈ ಹಿಂದೆ ಕೇಂದ್ರ ಸರ್ಕಾರ ಮೇ ತಿಂಗಳ ಹಂಚಿಕೆಯಲ್ಲಿ ಕರ್ನಾಟಕಕ್ಕೆ ರೂ.1,678.57 ಕೋಟಿ ನೀಡುವುದಾಗಿ ತಿಳಿಸಿತ್ತು. ಆದರೆ, ಇದು 2020-21ರ ಬಜೆಟ್ ಅಂದಾಜು ರೂ.2,000 ಕೋಟಿಗಿಂತಲೂ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. 

28 ರಾಜ್ಯಗಳಿಗೆ ರೂ.46,038.70 ಕೋಟಿ ಹಣವನ್ನು ಮೀಸಲಿಡಲಾಗಿದ್ದು, ತೆರಿಗೆ ಹಣವನ್ನು ಕಂತುಗಳ ರೂಪದಲ್ಲಿ ಆಯಾ ರಾಜ್ಯಗಳಿಗೆ ನೀಡಲಾಗುತ್ತದೆ ಎಂದು ಕೇಂದ್ರ ತಿಳಿಸಿತ್ತು. ಇದರಂತೆ, ಕರ್ನಾಟಕಕ್ಕೆ 1,678.57 ಕೋಟಿ ಹಣ ನೀಡುವುದಾಗಿ ತಿಳಿಸಿದ್ದು, ಮೇ ಹಾಗೂ ಏಪ್ರಿಲ್ ಎರಡೂ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಇದೀಗ ಕಂತುಗಳ ರೂಪದಲ್ಲಿ ರೂ.1,678.57 ಕೋಟಿ ಹಣವನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. 

ಈ ಬಗ್ಗೆ ವಿತ್ತ ಸಚಿವಾಲಯ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, 2020-2021ರ ಬಜೆಟ್ನಲ್ಲಿ ಯೋಜಿಸಲಾದ ತೆರಿಗೆ ರಶೀದಿಗಳ ಆಧಾರದ ಮೇಲೆ ಬಿಡುಗಡೆ ಮಾಡಲಾದ ಹಣವನ್ನು ಲೆಕ್ಕಹಾಕಲಾಗಿದೆ ಎಂದು ತಿಳಿಸಿದೆ. 

ತೆರಿಗೆ ಪಾಲಿನ ಹಣ ಉತ್ತರಪ್ರದೇಶ ರಾಜ್ಯಕ್ಕೆ ಹೆಚ್ಚಾಗಿ ಹರಿದು ಬಂದಿದೆ. ಉತ್ತರ ಪ್ರದೇಶಕ್ಕೆ ರೂ.8,255.19ಕ್ಕೆ ನೀಡಿದ್ದರೆ, ಬಿಹಾರಕ್ಕೆ ರೂ.4,631.96 ಮಧ್ಯಪ್ರದೇಶಕ್ಕೆ ರೂ. 3,630.60 ಕೋಟಿ ನೀಡಲಾಗಿದೆ.

SCROLL FOR NEXT