ರಾಜ್ಯ

ಗೊಂಬೆ ತಯಾರಕರ ಕಷ್ಟಕ್ಕೆ ಸ್ಪಂದಿಸಿ: ಸಿಎಂ ಗೆ ಪತ್ರ ಬರೆದು ಎಚ್ ಡಿ ಕುಮಾರಸ್ವಾಮಿ ಒತ್ತಾಯ

Shilpa D

ರಾಮನಗರ: ಬೊಂಬೆ ತಯಾರಕರ ಬದುಕು ಬಹಳ ಕಷ್ಟವಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೂಡಲೇ ಕರಕುಶಲಕರ್ಮಿಗಳಿಗೆ ತಾತ್ಕಾಲಿಕವಾಗಿ ಪರಿಹಾರ ಕೊಡಬೇಕೆಂದು ಒತ್ತಾಯಿಸಿ ಮಾಜಿ ಸಿಎಂ ಮತ್ತು ಚನ್ನಪಟ್ಟಣ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಪಂಚದಲ್ಲಿ ಪ್ರಸಿದ್ಧಿ ಪಡೆದ ಚನ್ನಪಟ್ಟಣದ ಬೊಂಬೆಗಳು ಕಳೆದ ಎರಡು ತಿಂಗಳಿಂದ ಈ ಗೊಂಬೆಗಳು ಮಾರಾಟವಾಗುತ್ತಿಲ್ಲ, ತಯಾರಾದ ಬೊಂಬೆಗಳು ಹೊರರಾಜ್ಯಗಳಿಗೆ ರಫ್ತಾಗುತ್ತಿಲ್ಲ. ಪ್ರಮುಖವಾಗಿ ಚನ್ನಪಟ್ಟಣದಲ್ಲಿ 500 ಕ್ಕೂ ಹೆಚ್ಚು ಗೊಂಬೆ ತಯಾರಿಕಾ ಘಟಕಗಳಿವೆ, 1 ಸಾವಿರಕ್ಕೂ ಹೆಚ್ಚು ಜನ ಗೊಂಬೆ ತಯಾರಿಕೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. 

ಆದರೆ ಎರಡು ತಿಂಗಳಿಂದ ಅವರಿಗೆಲ್ಲ ಕೆಲಸವೇ ಇಲ್ಲದಂತಾಗಿದೆ. ಇಡೀ ವಿಶ್ವದಲ್ಲೇ ಚನ್ನಪಟ್ಟಣ ಗೊಂಬೆಗಳು ಅಂದ್ರೆ ಹೆಸರುವಾಸಿ. ಆದರೆ ಈಗ ಆ ಗೊಂಬೆಗಳನ್ನ ತಯಾರು ಮಾಡುವವರೇ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಇದೆಲ್ಲವನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಕ್ರಮವಹಿಸಬೇಕು. ಚನ್ನಪಟ್ಟಣ ಗೊಂಬೆಗಳ ಮೂಲಕ ಭಾರತ ದೇಶದ ಹಿರಿಮೆಯನ್ನ ಎತ್ತಿಹಿಡಿಯುತ್ತಿದ್ದ ಕರಕುಶಲಕರ್ಮಿಗಳಿಗೆ ನೆರವಾಗಬೇಕೆಂದು ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
 

SCROLL FOR NEXT