ರಾಜ್ಯ

'ರಾಕ್ಷಸರ ಹತ್ತಿರ ಕೊರೋನಾ ಸುಳಿಯಲ್ಲ: ಕೊರೋನಾ ಬರುತ್ತದೆ ಎಂದು ಹೆಣದ ರೀತಿ ಮನೆಯಲ್ಲಿ ಇರಲು ಸಾಧ್ಯವೇ?'

Shilpa D

ಶಿವಮೊಗ್ಗ: ರಾಕ್ಷಸರಿಗೆ ಕೊರೊನಾ ರೋಗ ಬರುವುದಿಲ್ಲ, ಅದರಲ್ಲೂ ನನ್ನಂತವನಿಗಂತೂ ಅಪ್ಪಿತಪ್ಪಿಯೂ ಕೊರೋನಾ ಬರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಚಟಾಕಿ ಹಾರಿಸಿದರು.

ನಿಮಗೆ ಕೊರೊನಾ ವೈರಸ್ ಬಂದಿದೆಯೇ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಕೆ.ಎಸ್ ಈಶ್ವರಪ್ಪನವರು ರಾಕ್ಷಸರಿಗೆ ಕೊರೊನಾ ವೈರಸ್ ಬರುವುದಿಲ್ಲ, ನನ್ನಂತವನಿಗಂತೂ ಮೊದಲೇ ಬರುವುದಿಲ್ಲ ಎಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ""ಕೊರೊನಾ ವೈರಸ್ ಎದುರಿಸುತ್ತೇನೆ ಎಂಬ ಆತ್ಮಸ್ಥೈರ್ಯ ಇರಬೇಕು. ಇದರ ಜೊತೆಗೆ ಜಾಗರೂಕತೆಯೂ ಬೇಕು‌. ಕೊರೊನಾ ಎಂಬ ಭಯದಿಂದ ಶಾಸಕರು, ಸಚಿವರು,ಸಂಸದರು ಮನೆಯಲ್ಲಿ ಇದ್ದರೆ ಅಭಿವೃದ್ಧಿ ಕಾಮಗಾರಿಗಳು ನಡೆಯುವುದು ಹೇಗೆ(?) ಎಂದು ಸುದ್ದಿಗಾರನ್ನು ಅವರು ಪ್ರಶ್ನೆ ಮಾಡಿದರು.

ಇಡೀ ಪ್ರಪಂಚವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಜನ ಲಕ್ಷಾಂತರ ರುಪಾಯಿ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ ಎಂದರು.

ಕೊರೊನಾ ವೈರಸ್ ವಿರುದ್ಧ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಂದಾಗಿ ಹೋರಾಟ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹೇಳಿಕೆಯಿಂದ ಎಲ್ಲರಿಗೂ ನೋವಾಗಿದೆ ಎಂದು ತಿಳಿಸಿದರು.

ಸೋನಿಯಾ ಗಾಂಧಿ ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ನಾನು ಹೇಳುವುದಿಲ್ಲ, ಸಾಗರದ ಒಬ್ಬ ವಕೀಲ ಸೋನಿಯಾ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತನ್ನ ಕೆಲಸವನ್ನು ತಾನು ಮಾಡಿದ್ದಾನೆ ಎಂದು ಸಮರ್ಥಿಸಿಕೊಂಡರು.

SCROLL FOR NEXT