ರಾಜ್ಯ

ಇದೊಂದು ಬೇಕಾಬಿಟ್ಟಿ ಲಾಕ್ ಡೌನ್, ಸಂಡೇ ಲಾಕ್ ಡೌನ್ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ:ಯು ಟಿ ಖಾದರ್

Sumana Upadhyaya

ಮಂಗಳೂರು: ಸರ್ಕಾರದ ಭಾನುವಾರ ಲಾಕ್ ಡೌನ್ ಪರಿಕಲ್ಪನೆಯನ್ನು ಮಾಜಿ ಸಚಿವ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಟೀಕಿಸಿದ್ದಾರೆ.

ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಇತ್ಯಾದಿಗಳನ್ನು ತೆರೆದು ಜನರನ್ನು ಮಾತ್ರ ಹೊರಗೆ ಓಡಾಡಬೇಡಿ, ದಿನವಿಡೀ ಕರ್ಫ್ಯೂ ಇದೆ, ಸೆಕ್ಷನ್ 144 ಜಾರಿಯಲ್ಲಿದೆ, ಹೊರಗೆ ಬರಬೇಡಿ ಎಂದು ಹೇಳಿದರೆ ಹೇಗೆ?ಈ ಸಂಡೆ ಲಾಕ್ಡೌನ್ ನ ಜಾರಿಯ ವೈಜ್ಞಾನಿಕ ಕಾರಣವೇನಿದೆ ಎಂದು ಸರ್ಕಾರವನ್ನು ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರ ಜೊತೆಗೆ ಮಾತನಾಡುತ್ತಿದ್ದೆ. ಅವರ ಜೊತೆ ಕೂಡ ನನ್ನ ಸಂದೇಹವನ್ನು ಹೇಳಿಕೊಂಡೆ. ಸರಳವಾಗಿ ಹೇಳುವುದಾದರೆ ಇದೊಂದು ಬೇಕಾಬಿಟ್ಟಿ ಲಾಕ್ ಡೌನ್. ಈ ಯು ಟರ್ನ್ ಸರ್ಕಾರ ತಜ್ಞರ ಜೊತೆ ಕುಳಿತು ತೀರ್ಮಾನ ಮಾಡುವುದು ಒಳಿತು ಎಂದು ಹೇಳಿದ್ದಾರೆ.

SCROLL FOR NEXT