ರಾಜ್ಯ

800 ರೂಪಾಯಿಗೆ ಬೌನ್ಸ್ ಬೈಸಿಕಲ್, 500 ದ್ವಿಚಕ್ರ ವಾಹನಗಳ ಮಾರಾಟ!

Srinivas Rao BV

ಬೆಂಗಳೂರು: ಬೆಂಗಳೂರು ಮೂಲದ ಸ್ಕೂಟರ್ ರೆಂಟಲ್ ಸ್ಟಾರ್ಟ್ ಅಪ್ ಬೌನ್ಸ್ ರೂಪಾಂತರಗೊಳ್ಳುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ನಿರ್ಧರಿಸಿದೆ. 

ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಬೌನ್ಸ್ ತನ್ನಲ್ಲಿರುವ ಬೆಂಗಳೂರು-ಹೈದರಾಬಾದ್ ನಾದ್ಯಂತ 1,500 ಬೈಸಿಕಲ್ ಗಳನ್ನು 800 ರೂಪಾಯಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದೆ. 

ಸ್ಕೂಟರ್ ಶೇರಿಂಗ್ ಉದ್ಯಮದತ್ತ ಬೌನ್ಸ್ ಹೆಚ್ಚಿನ ಗಮನ ಹರಿಸುತ್ತಿದ್ದು, ಎಲೆಕ್ಟ್ರಿಕ್ ವೆಹಿಕಲ್ ಗಳ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದೆ. ಕಡಿಮೆ ದೂರದ ಟ್ರಿಪ್ ಗಳಿಗೆ ಮಾತ್ರ ದ್ವಿಚಕ್ರವಾಹನಗಳು ಉತ್ತಮ ಎಂಬುದನ್ನು ಅರಿತೆವು, ಆದ ಕಾರಣ ಇಂಧನ ಚಾಲಿತ 500 ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಬೌನ್ಸ್ ವಕ್ತಾರರು ತಿಳಿಸಿದ್ದಾರೆ. 

ಬೌನ್ಸ್ ನ ಸಹ ಸಂಸ್ಥಾಪಕ ವಿವೇಕಾನಂದ ಹಳ್ಳೆಕೆರೆ ಟ್ವಿಟರ್ ನಲ್ಲಿ ಬರೆದಿದ್ದು, "ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಏನು ಬೇಕಾದರೂ ವೈರಲ್ ಮಾಡಬಹುದು, ಕೆಲವು ಬಳಕೆಯಾದ ಸ್ಕೂಟರ್ ಗಳನ್ನು ಮಾರಾಟ ಮಾಡಲು ಮುಂದಾಗಿದ್ದೆವೆ, ಆದರೆ ಇದು ಅದರದ್ದೇ ಆದ ಸ್ವರೂಪದಲ್ಲಿ ವೈರಲ್ ಆಗತೊಡಗಿ ಸಂಸ್ಥೆಯನ್ನೇ ಮುಚ್ಚುತ್ತಿದ್ದೇವೆ ಎಂಬ ಪ್ರಚಾರ ಪಡೆಯಿತು. ಪ್ರಚಾರದಲ್ಲಿ ಕೆಟ್ಟ ಪ್ರಚಾರ ಎಂಬುದೇನಿಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಕೊರೋನಾ ಸಂದರ್ಭದಲ್ಲಿ ಬೌನ್ಸ್ ದ್ವಿಚಕ್ರ ವಾಹನಗಳ ಬಗ್ಗೆ ಗ್ರಾಹಕರಲ್ಲಿ ಆತಂಕ ಇರುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳಿಗೆ ಕ್ರಿಮಿನಾಶಕ ಸಿಂಪಡಿಸಲಾಗಿದ್ದು, ಮೂರು ತಿಂಗಳ ಕಾಲ ಕ್ರಿಮಿನಾಶಕದ ಕೋಟಿಂಗ್ ಹಾಗೆಯೇ ಇರಲಿದೆ ಎಂದು ಹೇಳಿದ್ದಾರೆ. 

SCROLL FOR NEXT