ರಾಜ್ಯ

ಕರೋನಾ ನಿಯಂತ್ರಣ ಸಂಬಂಧ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ

Raghavendra Adiga

ಬೆಂಗಳೂರು: ಕರೋನಾ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು ಕೊರೊನಾ ನಿಯಂತ್ರಣ ರಾಜ್ಯದಲ್ಲಿ ಯಾವ ಹಂತದಲ್ಲಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಬೆಂಗಳೂರು ನಗರ ಹಾಗೂ ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿನ್ನೆಲೆ ಕೇಂದ್ರಕ್ಕೆ ಮಾಹಿತಿ ಕಳಿಸಿಕೊಡಲು ಲಾಕ್ ಡೌನ್ ಬಳಿಕ ವಿನಾಯಿತಿ ಬಗ್ಗೆ ಡ್ರಾಫ್ಟ್ ರೆಡಿ ಮಾಡಲು ಅಧಿಕಾರಿಗಳಿಗೆ ಅವರು ಸೂಚಿಸಿದರು.

ರಾಜ್ಯದ ಮಾರ್ಗಸೂಚಿ ಬಗ್ಗೆ ಡ್ರಾಫ್ಟ್ ರೆಡಿ ಮಾಡುವಂತೆ ಸೂಚನೆ ನೀಡಿರುವ ಸಿಎಂ ಆದಷ್ಟು ತ್ವರಿತವಾಗಿ ಅದನ್ನ ತಮಗೆ ಸಲ್ಲಿಸು ವಂತೆ ತಿಳಿಸಿದ್ದಾರೆ.ರಾಜ್ಯದಲ್ಲಿ ಆರ್ಥಿಕ ಸುಧಾರಣೆ ಬಗ್ಗೆ ಇರೋ ಮಾರ್ಗಪಾಯಗಳ ಬಗ್ಗೆ ಕೂಡ ಸಿಎಂ ಅಧಿಕಾರಿಗಳೊಂದಿಗೆ ಪರಾಮರ್ಶಿಸಿ ದ್ದಾರೆ.ಲಾಕ್ ಡೌನ್ ವಿನಾಯತಿ ಕೊಡುವುದರಿಂದ ಆರ್ಥಿಕ ಸಂಕಷ್ಟ ಪರಾಗುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು,ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಜನರಿಗೆ ಮುಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮಳೆಗಾಲ ಆರಂಭವಾಗುತ್ತಿರುವುದರಿಂದ ಮುನ್ನೆಚ್ಚರಿಕೆಯ ಕ್ರಮಗಳನ್ನ ತೆಗೆದುಕೊಳ್ಳುವಂತೆ ಸಭೆಯಲ್ಲಿ ಸಿಎಂ ಸೂಚನೆ ಕೊಟ್ಟಿದ್ದಾರೆ. ಮಳೆಗಾಲ ಆರಂಭದಲ್ಲಿ ಉಂಟಾಗುವ ಸಮಸ್ಯೆಗಳು, ಹರಡುವ ರೋಗಗಳ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ಮಾರ್ಗದರ್ಶನ ನೀಡಿದ್ದಾರೆ.
 

SCROLL FOR NEXT