ರಾಜ್ಯ

ಗ್ರಾಮೀಣಾಭಿವೃದ್ಧಿ ವಿವಿ ಉಪ ಕುಲಪತಿಯಾಗಿ 'ಕಳಂಕಿತ' ಆರೋಪ ಹೊತ್ತ ಪ್ರಾಧ್ಯಾಪಕರ ನೇಮಕ!

Manjula VN

ಬೆಂಗಳೂರು: ಅಕ್ರಮ ನೇಮಕಾತಿ ಹಾಗೂ ಅವ್ಯವಹಾರ ಆರೋಪ ಹೊತ್ತಿರುವ ಕಳಂಕಿತ ಪ್ರಾಧ್ಯಾಪಕ ಡಾ.ವಿಷ್ಣುಕಾಂತ ಎಸ್.ಚಟ್ಟಪಲ್ಲಿಯವರನ್ನು ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. 

ಈ ಹಿಂದೆ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಆಗಿದ್ದ ಚಟ್ಟಪಲ್ಲಿಯವರು, ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆಸಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ.ಪದ್ಮರಾಜ್ ಆಯೋಗವು ವಿಚಾರಣೆಗೊಳಪಡಿಸಿತ್ತು. ಪದ್ಮರಾಜ್ ನೇತೃತ್ವದಲ್ಲಿ ಸಮಿತಿಯನ್ನು ನೇಮಕ ಮಾಡಲಾಗಿತ್ತು ಸಮಿತಿಯ ವರದಿಯಲ್ಲಿ ಆರೋಪಗಳು ಸಾಬೀತಾಗಿದ್ದು, ಕ್ರಮಕ್ಕೆ ಸಮಿತಿ ಶಿಫಾರಸ್ಸು ಮಾಡಿತ್ತು. ಆದರೆ, ಈ ವರದಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. 

ಇದಲ್ಲದೆ 2014ರ ಆಗಸ್ಟ್ 20ರಂದು ಅಧಿಕಾರಕ್ಕೆ ಬರುವುದಕ್ಕೂ 50 ದಿನಗಳ ಮುಂದೆಯೈಮ ಚಟ್ಟಪಲ್ಲಿಯವರು ಅಧಿಕೃತ ಸ್ಟ್ಯಾಂಪ್ ಪೇಪರ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಅಧಿಕಾರಿಗಳು ನೋಟಿಸ್ ನೀಡಿ ತನಿಖೆಗೆ ಆದೇಶಿಸಿದ್ದರು. ಅಲ್ಲದೆ, ಈ ಬಗ್ಗೆ ಮೂವರು ಸದಸ್ಯರ ಸಮಿತಿಯನ್ನೂ ನೇಮಕ ಮಾಡಲಾಗಿತ್ತು, ಈ ಸಮಿತಿಯು ತಾಂತ್ರಿಕ ಆಧಾರದ ಮೇಲೆ ನೋಡುವುದಾದರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿರ್ವಹಣಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಲು ಚಟ್ಟಪಲ್ಲಿಯವರು ತಾಂತ್ರಿಕವಾಗಿ ಅರ್ಹತೆ ಹೊಂದಿಲ್ಲ ಎಂದು ತಿಳಿಸಿತ್ತು. ಈ ಕುರಿತ ತನಿಖೆ ಇನ್ನೂ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ. 

ಈ ಎಲ್ಲಾ ಆರೋಪಗಳ ನಡುವಲ್ಲೂ ಇದೀಗ ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪ ಕುಲಪತಿಯನ್ನಾಗಿ ಡಾ.ವಿಷ್ಣುಕಾಂತ ಎಸ್.ಚಟ್ಟಪಲ್ಲಿಯವರನ್ನು ನೇಮಕ ಮಾಡಲಾಗಿದೆ. 

SCROLL FOR NEXT