ರಾಜ್ಯ

‘ಕಲ್ಯಾಣ ಕರ್ನಾಟಕ’ ಪ್ರದೇಶದ ಜಿಲ್ಲೆಗಳಲ್ಲಿ ಮಿಡತೆ ಹಾವಳಿ ಸಾಧ್ಯತೆ: ಕೃಷಿ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ

Lingaraj Badiger

ಕಲಬುರಗಿ: ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕಿನ ನಡುವೆಯೇ ಬೀದರ್ ಮತ್ತು ಕಲಬುರಗಿ ಸೇರಿದಂತೆ ಕಲ್ಯಾಣ-ಕರ್ನಾಟಕದ ಜಿಲ್ಲೆಗಳಲ್ಲಿ ಮಿಡತೆ ಹಾವಳಿ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ಎದುರಿಸಲು ಸಂಬಂಧಿತ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಯಾವುದೇ ಸಂಭವನೀಯ ಹಾನಿಯನ್ನು ಎದುರಿಸಲು ಕೃಷಿ ಇಲಾಖೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂಚಿತವಾಗಿಯೇ ತೆಗೆದುಕೊಂಡಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ರೆತೇಂದ್ರನಾಥ ಸುಗಾರ್ ಗುರುವಾರ ಹೇಳಿದ್ದಾರೆ.

ಪ್ರಸ್ತುತ ಗಾಳಿ ಬೀಸುವುದನ್ನು ಅನುಸರಿಸಿ ಮಿಡತೆಗಳು ಗಾಳಿಯ ಪ್ರವಾಹದಿಂದ ರಾಜ್ಯದ ಉತ್ತರ ಜಿಲ್ಲೆಗಳನ್ನು ಪ್ರವೇಶಿಸುವ ಸಾಧ್ಯತೆ 50: 50 ರಷ್ಟಿದೆ ಎಂದು ಅವರು ಹೇಳಿದ್ದಾರೆ.

ಮಿಡತೆಗಳನ್ನು ನಿಯಂತ್ರಿಸಲು ಕೀಟನಾಶಕಗಳು ಸ್ವಲ್ಪಮಟ್ಟಿಗೆ ಸಹಾಯವಾಗಬಹುದು. ಕೀಟಗಳನ್ನು ಸುಡಲು ಬ್ಲೋ 
ಟಾರ್ಚ್‌ಗಳ ಬಳಕೆಯು ಇವುಗಳನ್ನು ನಿಯಂತ್ರಿಸುವ ಏಕೈಕ ಮಾರ್ಗವೆಂದು ತೋರುತ್ತದೆ ಎಂದು ನಿವೃತ್ತ ಕೀಟಶಾಸ್ತ್ರ ಪ್ರಾಧ್ಯಾಪಕ ಎನ್ ಇ ತ್ಯಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. 

1962 ರಲ್ಲಿ ಮಿಡತೆಗಳ ಸಮೂಹ ಕರ್ನಾಟಕಕ್ಕೆ ಪ್ರವೇಶಿಸಿದ ಬಗ್ಗೆ ದೃಢಪಡದ ವರದಿಗಳಿವೆ. ಆದರೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ತಿಪ್ಪಯ್ಯ ಹೇಳಿದ್ದಾರೆ.

"ಮಿಡತೆಗಳು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಗಳು ಇಲ್ಲವಾದರೂ, ಅವು ಗಾಳಿ ಬೀಸುವ ದಿಕ್ಕನ್ನು ಆಧರಿಸಿವೆ. ಮಿಡತೆಗಳು ರಾಜ್ಯಕ್ಕೆ ಪ್ರವೇಶಿಸಿದರೆ ಬೀದರ್ ಮತ್ತು ಇತರ ಒಣ ಪ್ರದೇಶವಿರುವ ಉತ್ತರದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತವೆ’ ಎಂದು ಅವರು ಹೇಳಿದ್ದಾರೆ. 

ಮುನ್ನೆಚ್ಚರಿಕೆ ಕ್ರಮವಾಗಿ ಮರುಭೂಮಿ ಮಿಡತೆಗಳನ್ನು ನಿಯಂತ್ರಿಸುವ ವಿಧಾನಗಳನ್ನು ವಿವರಿಸುವ ಸಲಹೆ-ಎಚ್ಚರಿಕೆಯನ್ನು ರಾಜ್ಯ ಕೃಷಿ ಇಲಾಖೆ ಹೊರಡಿಸಿದೆ.

ಪರಿಸರ ಸ್ನೇಹಿ ಬೇವು ಆಧಾರಿತ ಕೀಟನಾಶಕಗಳನ್ನು ಸಿಂಪಡಿಸುವುದು, ಟ್ರಾಕ್ಟರ್, ಅಗ್ನಿಶಾಮಕ ವಾಹನ ಬಳಸಿಕೊಂಡು ಮಾಲಾಥಿಯಾನ್ ಕೀಟನಾಶಕಗಳ ಸಿಂಪಡಿಸುವಿಕೆ, ಜೈವಿಕ-ಕೀಟನಾಶಕ ಮೆಟಾರ್ಜಿಜಿಯಂ ಅನಿಸೊಪ್ಲಿಯಾವನ್ನು ಸಿಂಪಡಿಸುವುದರಿಂದ ಹಾವಳಿಯನ್ನು ನಿಯಂತ್ರಿಸಬಹುದಾಗಿದೆ.

ಇದಲ್ಲದೆ, ಈ ಮಿಡತೆಗಳನ್ನು ತಿನ್ನುವ ಪಕ್ಷಿಗಳು ಮತ್ತು ಕೋಳಿಗಳಿಂದ ಕೀಟಗಳ ಹಾವಳಿಯನ್ನು ನಿಯಂತ್ರಿಸಬಹುದಾಗಿದೆ.

SCROLL FOR NEXT