ಸಾಂದರ್ಭಿಕ ಚಿತ್ರ 
ರಾಜ್ಯ

ಕಲ್ಯಾಣ ಕರ್ನಾಟಕಕ್ಕೆ ಕರಾಳ ಶುಕ್ರವಾರ: ಒಂದೇ ದಿನದಲ್ಲಿ 192 ಕೊರೋನಾ ಕೇಸ್

ಕಲ್ಯಾಣ ಕರ್ನಾಟಕಕ್ಕೆ ಶುಕ್ರವಾರ ಕರಾಳವಾಗಿದೆ, ರಾಜ್ಯದಲ್ಲಿ ಪತ್ತೆಯಾದ 284 ಪ್ರಕರಣಳ ಪೈಕಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ 192  ಕೇಸ್ ಪತ್ತೆಯಾಗಿವೆ.

ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಶುಕ್ರವಾರ ಕರಾಳವಾಗಿದೆ, ರಾಜ್ಯದಲ್ಲಿ ಪತ್ತೆಯಾದ 284 ಪ್ರಕರಣಳ ಪೈಕಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ 192  ಕೇಸ್ ಪತ್ತೆಯಾಗಿವೆ.

ಒಟ್ಟಾರೆ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಅತೀ ಹೆಚ್ಚು 248 ಮಂದಿ  ಸೋಂಕಿತರಾಗಿದ್ದಾರೆ. ಅಂತೆಯೇ ಅತೀ ಹೆಚ್ಚು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿಗೆ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ  ಗುರುವಾರ ಹೆಚ್ಚು ಸೋಂಕು ಪತ್ತೆಯಾಗಿ ಕರಾವಳಿ ಭಾಗದಲ್ಲಿ ಆತಂಕ ಮೂಡಿಸಿತ್ತು. ಶುಕ್ರವಾರ ಇದೇ ಮಹಾರಾಷ್ಟ್ರ ಮಹಾ ವಲಸೆ ಪ್ರಭಾವ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮೇಲಾಗಿದೆ. ದಿನದ ಶೇ.75 ಸೋಂಕಿತರು ರಾಯಚೂರು (62),  ಕಲಬುರಗಿ (61), ಯಾದಗಿರಿ(60) ಜಿಲ್ಲೆಗಳಲ್ಲಿಯೇ ವರದಿಯಾಗಿದ್ದು, ಎಲ್ಲರೂ ಮಹಾರಾಷ್ಟ್ರದಿಂದ  ವಲಸೆ ಬಂದ ಕಾರ್ಮಿಕರು ಮತ್ತವರ ಅವರ ಕುಟುಂಬಸ್ಥರಾಗಿದ್ದಾರೆ.

ರಾಜ್ಯದ ಸೋಂಕು ಹೆಚ್ಚಳಕ್ಕೆ ಮಹಾರಾಷ್ಟ್ರ ಕೊಡುಗೆ ಮುಂದುವರಿದಿದೆ. ಶುಕ್ರವಾರ ದೃಢಪಟ್ಟ 248 ಪ್ರಕರಣದಲ್ಲಿ 227 ಮಂದಿ ಹೊರರಾಜ್ಯದಿಂದ ಕರ್ನಾಟಕಕ್ಕೆ ಬಂದವರು. ಈ ಪೈಕಿ ಮಹಾರಾಷ್ಟ್ರದಿಂದ ಅತೀ ಹೆಚ್ಚು 209 ಮಂದಿ,  ನವದೆಹಲಿ 8 ಮಂದಿ, ರಾಜಸ್ಥಾನದಿಂದ 7 ಮಂದಿ, ಆಂಧ್ರಪ್ರದೇಶ ಮತ್ತು  ತಮಿಳುನಾಡು, ಗುಜರಾತ್‌ನಿಂದ ತಲಾ ಒಬ್ಬರು ರಾಜ್ಯಕ್ಕೆ ಬಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!