ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ 
ರಾಜ್ಯ

ಆರ್ ಆರ್ ನಗರ ಉಪ ಚುನಾವಣೆ: 144 ಸೆಕ್ಷನ್ ಜಾರಿ, ಸಂಜೆ 5 ಗಂಟೆಯಿಂದ ಮದ್ಯ ನಿಷೇಧ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರಿನ ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಈ ಹಿನ್ನಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಹಲವು ಸೂಚನೆಗಳನ್ನು ನೀಡಿದ್ದಾರೆ.

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಈ ಹಿನ್ನಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಹಲವು ಸೂಚನೆಗಳನ್ನು ನೀಡಿದ್ದಾರೆ.

ಚುನಾವಣಾ ಸಿದ್ಧತೆ ಹಾಗೂ ಭದ್ರತೆ ಬಗ್ಗೆ ನಗರದಲ್ಲಿಂದು ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂಥ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆರ್‍ಆರ್ ನಗರದಲ್ಲಿ  ಇಂದು 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಹಾಕಲಾಗುತ್ತದೆ. ಸಂಜೆ 6 ಗಂಟೆಯ ನಂತರ ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲ. ಹೀಗಾಗಿ ಮತದಾರರು ಬಿಟ್ಟು ಬೇರೆ ಯಾರು ಕ್ಷೇತ್ರದಲ್ಲಿ ಇರುವಂತಿಲ್ಲ. ಮುಖಂಡರು, ನಾಯಕರು ಇರಲು ಅವಕಾಶ ಇಲ್ಲ. ತಕ್ಷಣವೇ ಸಂಜೆ ವೇಳೆಗೆ ಕ್ಷೇತ್ರ ಬಿಡಬೇಕು. ಕ್ಷೇತ್ರದಲ್ಲಿ  ಇದ್ದರೆ ಕೇಸ್ ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಆರ್ ಆರ್ ನಗರದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳ ನೇಮಕ ಮಾಡಲಾಗಿದ್ದು, 9 ಹೆಚ್ಚುವರಿ ತಂಡ, ವಿಎಸ್ ಟಿ ತಂಡ 8 ನೇಮಕ, 38 ಮಾರ್ಷಲ್ ಗಳ ತಂಡ, ವಿಡಿಯೋ ಗ್ರಾಫರ್ ತಂಡ 5, 56 ಸೆಕ್ಟರ್ ಆಫೀಸರ್, 8 ಅಬಕಾರಿ ತಂಡಗಳನ್ನು ನೇಮಕ ಮಾಡಲಾಗಿದೆ. ವಾಹನಗಳ ತಪಾಸಣೆ ನಡೆಯಲಿದ್ದು,  ಕಲ್ಯಾಣ ಮಂಟಪ, ಜನ ಸೇರುವ ಕಡೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸಂಜೆ 5 ಗಂಟೆಯಿಂದ 144 ಸೆಕ್ಷನ್ ಹಾಗೂ ಮದ್ಯ ನಿಷೇಧ ಸಹ ಜಾರಿ ಮಾಡಲಾಗುತ್ತಿದೆ. ಎಕ್ಸಿಟ್ ಪೋಲ್, ಜನಾಭಿಪ್ರಾಯ ಪೋಲ್ ಹಾಕುವಂತಿಲ್ಲ. ನವೆಂಬರ್3 ರಂದು ಬೆಳಗ್ಗೆ ನ. 7 ಗಂಟೆವರೆಗೂ ಎಕ್ಸಿಟ್   ಪೋಲ್ ಸಹ ಮಾಡುವಂತಿಲ್ಲ. ನಾಳೆ ಮಾಸ್ಟರಿಂಗ್ ಸೆಂಟರ್‍ಗಳ ಒಪನ್ ಆಗಲಿದೆ. ಜ್ಞಾನಾಕ್ಷಿ ವಿದ್ಯಾನಿಕೇತನಗಳು ಓಪನ್ ಆಗಲಿದೆ. ಪೋಲಿಂಗ್ ಮೆಟಿರಿಯಲ್ ಕಲೆಕ್ಟ್ ಮಾಡಲಾಗುತ್ತದೆ. ಸಂಜೆ ಪೊಲಿಂಗ್ ಸೆಂಟರ್ ತಲುಪಿದ ವರದಿ ಪಡೆಯಬೇಕಾಗಿದೆ. 678 ಬೂತ್ ಗಳಿವೆ. ಆರೋಗ್ಯಾಧಿಕಾರಿಗಳನ್ನು ನೇಮಕ  ಮಾಡಲಾಗುತ್ತಿದೆ ಎಂದರು.

ಪೊಲೀಸ್ ಬಿಗಿ ಭದ್ರತೆ
ಇದೇ ವೇಳೆ ಕಮಲ್ ಪಂತ್ ಮಾತನಾಡಿ, 21 ದಿನದಲ್ಲಿ ಚುನಾವಣಾ ಪ್ರಚಾರ ಪ್ರಕ್ರಿಯೆ ಶಾಂತ ರೀತಿಯಾಗಿ ನಡೆದು ಬಂದಿದೆ. ಸಣ್ಣಪುಟ್ಟ ಪ್ರಸಂಗ ಬಂದಾಗ ಪೊಲೀಸರು ನಿಭಾಯಿಸಿದ್ದಾರೆ. ಒಂದೇ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 30 ತಂಡ ಭದ್ರತೆಗಾಗಿ ನೇಮಕ ಮಾಡಲಾಗಿತ್ತು. ಇಂದು ಪ್ರಚಾರದ  ಕಡೆ ದಿನವಾಗಿದ್ದರಿಂದ ಬಂದೋಬಸ್ತ್ ಗೆ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. 678 ಮತಗಟ್ಟೆಗಳಿವೆ. 82 ಸೂಕ್ಷ್ಮ ಮತಗಟ್ಟೆ ಇದೆ. 181 ಜಾಗಗಳಲ್ಲಿ ಮತಗಟ್ಟೆ ಇದೆ. ಪ್ರತ್ಯೆಕವಾಗಿ ಎಎಸ್ ಐ ಹಾಗೂ ಮೂವರು ಸಿಬ್ಬಂದಿ ಇರುತ್ತಾರೆ. ಹೋಂ ಗಾರ್ಡ್ ಸಹ ಬೂತ್ ಗಳಲ್ಲಿ ನೇಮಕ ಮಾಡಲಾಗಿದೆ. 2563 ಜನ ಭದ್ರತೆಗಾಗಿ  ನಿಯೋಜನೆ, ಮೊಬೈಲ್ ವ್ಯವಸ್ಥೆ ಮಾಡಲಾಗಿದೆ. ಇದು ಸ್ವಲ್ಪ ಸೂಕ್ಷ್ಮಪ್ರದೇಶವಾಗಿದ್ದರಿಂದ ಲಾ ಅಂಡ್ ಆರ್ಡರ್ ಸಹ ನೋಡಿಕೊಳ್ಳಬೇಕಾಗಿದೆ. 102 ಮೊಬೈಲ್ 24 ಗಂಟೆ ಕೆಲಸ ಮಾಡಲಿದೆ.

91 ಚೀತಾ ಇಬ್ಬರು ಪೊಲೀಸರ ಕೆಲಸದಲ್ಲಿ ಇರ್ತಾರೆ . ತುರ್ತು ಪರಿಸ್ಥಿತಿ ವೇಳೆ 5 ನಿಮಿಷದಲ್ಲಿ ರೀಚ್ ಆಗ್ತಾರೆ. ಇಡೀ ದಿನ  3 ಡಿಸಿಪಿ, 30 ಇನ್ಸಪೆಕ್ಟರ್ 560 ಜನ ಕೆಲಸದಲ್ಲಿ ಇರ್ತಾರೆ. ಪ್ಯಾರಾ ಮಿಲಿಟರಿ ಫೋರ್ಸ್ ಸಹ ಭಾಗವಾಹಿಸಲಿದ್ದಾರೆ. 19 ಕೆಎಸ್ ಆರ್ ಪಿ ತುಕಡಿ, 20 ಆರ್ಮ್ ರಿಸರ್ವ ಸಹ ಇರಲಿದ್ದಾರೆ. ಚುನಾವಣೆ ಆಯೋಗ ನಿದೇರ್ಶನ ಪ್ರಕಾರ 300 ಶಸ್ತ್ರ ಸೀಜ್ ಆಗಿದೆ. ಸಂಜೆ 6 ಗಂಟೆಯಿಂದ ಚುನಾವಣೆಗೆ ಅಡ್ಡಿ ಮಾಡುವವರ ಮೇಲೆ ನಿಗಾ ಇಡಲಾಗುತ್ತದೆ. ಇಂದು ಸಂಜೆ 5 ಗಂಟೆಯಿಂದ ನ. 3ರವರೆಗೂ ಮಧ್ಯಾರಾತ್ರಿವರೆಗೂ ಮದ್ಯ ನಿಷೇಧ ಮಾಡಲಾಗುತ್ತದೆ. 144 ಸೆಕ್ಷನ್ ಇಂದಿನಿಂದ ಮತದಾನ ಪ್ರಕ್ರಿಯೆ ಮುಗಿದ ನಾಳೆವರೆಗೂ ಇರಲಿದೆ. ಇಂದು ಸಂಜೆ ಕ್ಷೇತ್ರದ  ಮತದಾರರು ಅಲ್ಲದವರು ಇರಬಾರದು ಎಂದು ತಿಳಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT