ರಾಜ್ಯ

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕ್ರಮ: ತುಮಕೂರಿನಲ್ಲಿ ಅಭಿಯಾನ ಆರಂಭಕ್ಕೆ ಮಕ್ಕಳ ಹಕ್ಕುಗಳ ಆಯೋಗ ಮುಂದು

Sumana Upadhyaya

ಬೆಂಗಳೂರು: ಮಕ್ಕಳ ಹಕ್ಕುಗಳ ರಾಜ್ಯ ರಕ್ಷಣಾ ಆಯೋಗ(ಕೆಎಸ್ ಸಿಪಿಸಿಆರ್) ಹಲವು ಸರ್ಕಾರಿ ಸಂಘಟನೆಗಳು ಮತ್ತು ಸಂಸ್ಥೆಗಳ ಜೊತೆ ಸೇರಿಕೊಂಡು ರಾಜ್ಯವನ್ನು ಬಾಲ ಕಾರ್ಮಿಕ ಮುಕ್ತಗೊಳಿಸಲು ನವೆಂಬರ್ ನಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತುಮಕೂರು ಜಿಲ್ಲೆಯಿಂದ ಈ ಕಾರ್ಯಕ್ರಮ ಆರಂಭವಾಗಲಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕೆಎಸ್ ಸಿಪಿಸಿಆರ್ ಅಧ್ಯಕ್ಷ ಡಾ ಆಂಟನಿ ಸೆಬಾಸ್ಟಿಯನ್, ಬಾಲ ಕಾರ್ಮಿಕ ಪದ್ಧತಿಯನ್ನು ರಾಜ್ಯದಿಂದ ಸಂಪೂರ್ಣ ನಿರ್ಮೂಲನೆ ಮಾಡುವುದು ಇದರ ಉದ್ದೇಶವಾಗಿದ್ದು, ಕಾನೂನು ಪ್ರಕಾರ ಕೂಡ ಅದು ತಪ್ಪು. ಕಳೆದ ಅಕ್ಟೋಬರ್ 22ರಂದು ಬಾಲ ಕಾರ್ಮಿಕತೆ ನಿರ್ಮೂಲನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಹಕ್ಕುಗಳ ಘಟಕ(ಡಿಸಿಪಿಯು) ತುಮಕೂರು, ಕಾರ್ಮಿಕ ಮತ್ತು ಪೊಲೀಸ್ ಇಲಾಖೆಗಳು, ವಕೀಲರು ಮತ್ತು ಎನ್ ಜಿಒಗಳ ಜೊತೆ ಸೇರಿಕೊಂಡು ಸಭೆ ನಡೆಸಿತ್ತು. ಮಾಜಿ ಅಡ್ವೊಕೇಟ್ ಜನರಲ್ ರವಿಕುಮಾರ್ ವರ್ಮ ಅವರು ಈ ಸಭೆಯನ್ನು ಆಯೋಜಿಸಿದ್ದರು, ಅವರು ತುಮಕೂರು ಯೋಜನೆಗೆ ಬೇಕಾದ ಎಲ್ಲಾ ನೆರವಿನ ಭರವಸೆ ನೀಡಿದ್ದರು ಎಂದು ಹೇಳಿದರು.

ಸಭೆಯಲ್ಲಿ, ಸಂಬಂಧಪಟ್ಟವರು ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಕೆಲಸ ಮಾಡಲು ಕೋರ್ ಸಮಿತಿಯನ್ನು ರಚಿಸುವ ಬಗ್ಗೆ ತೀರ್ಮಾನಿಸಲಾಯಿತು. ಶಿಕ್ಷಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡುವುದು, ಜಿಲ್ಲೆಯಲ್ಲಿ ಎಷ್ಟು ಮಂದಿ ಬಾಲ ಕಾರ್ಮಿಕರಿದ್ದಾರೆ ಎಂದು ಶೋಧ ನಡೆಸುವುದು, ಶಿಷ್ಟಾಚಾರ ಕಾರ್ಯವಿಧಾನ ಬಳಸಿಕೊಂಡು ಪುನರ್ವಸತಿ ಯೋಜನೆಯನ್ನು ರಚಿಸುವುದು ಮತ್ತು ಬಾಲ ಕಾರ್ಮಿಕತೆಯಿಂದ ರಕ್ಷಿಸಿದ ಮಕ್ಕಳ ನೆರವಿಗೆ ಸಿಗುವ ಧನಸಹಾಯ ಬಗ್ಗೆ ಪರಿಶೀಲನೆ ಸೇರಿದೆ.

ನಾವು ಪ್ರತಿ ಸರ್ಕಾರಿ ಶಾಲೆಯಲ್ಲಿ ಒಬ್ಬ ಶಿಕ್ಷಕರಿಗೆ ತರಬೇತಿ ನೀಡಲು ಯೋಜಿಸಿದ್ದೇವೆ, ಅಂಗನವಾಡಿ ಕಾರ್ಯಕರ್ತರು ಮತ್ತು ಎನ್‌ಜಿಒಗಳ ಮೂಲಕ ಪ್ರತಿ ಮಗುವೂ ಶಾಲೆಗೆ ಬರುತ್ತದೆಯೇ ಎಂದು ನೋಡಿಕೊಂಡು ಯಾರೂ ಶಾಲೆಯಿಂದ ಹೊರಗುಳಿದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಡಲು ಜಾಗೃತಿ ಅಭಿಯಾನ ಮತ್ತು ಮೊಬೈಲ್ ರ್ಯಾಲಿಗಳನ್ನು ನಡೆಸುತ್ತೇವೆ ”ಎಂದು ಡಾ ಆಂಥೋನಿ ಹೇಳಿದರು. "ಇದು ಲಾಕ್ ಡೌನ್ ಸಮಯದಲ್ಲಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸಹಾಯ ಮಾಡುವುದನ್ನು ಸಹ ಒಳಗೊಂಡಿರುತ್ತದೆ, ಇದರಿಂದಾಗಿ ಕೆಲವು ಆದಾಯದ ಮೂಲಗಳು ಸಿಗುತ್ತವೆ, ಪೋಷಕರಿಗೆ ತೊಂದರೆಯಾಗದಂತೆ ಮಕ್ಕಳನ್ನು ಪುನಃ ಶಾಲೆಗೆ ಕಳುಹಿಸುವ ಯೋಜನೆ ಸರ್ಕಾರ ಮಾಡಲಿದೆ ಎಂದರು.

ಎರಡನೇ ಹಂತದಲ್ಲಿ, ಮಕ್ಕಳನ್ನು ಕಾರ್ಮಿಕರನ್ನಾಗಿ ಕಳುಹಿಸುವ ಅಥವಾ ನೇಮಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ತುಮಕೂರು ರಾಜ್ಯ ರಾಜಧಾನಿ ಬೆಂಗಳೂರಿನ ಸಮೀಪ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪ್ರಾಯೋಗಿಕ ಯೋಜನೆಗಾಗಿ ಗುರುತಿಸಲಾಗಿದೆ. ಯೋಜನೆ ಕನಿಷ್ಠ ಒಂದು ವರ್ಷದ ಸಮಯ ತೆಗೆದುಕೊಳ್ಳುತ್ತದೆ ಎಂದರು.

SCROLL FOR NEXT