ರಾಜ್ಯ

ಸಿಸಿಬಿ ಭರ್ಜರಿ ಬೇಟೆ: 10 ಕುಖ್ಯಾತ ಡ್ರಗ್ಸ್ ಪೆಡ್ಲರ್ ಗಳ ಬಂಧನ, 90 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

Vishwanath S

ಬೆಂಗಳೂರು: ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ವಿದೇಶಗಳಿಂದ ಡಾರ್ಕ್ ನೆಟ್ ಮುಖಾಂತರ ಮಾದಕ ವಸ್ತುಗಳನ್ನು ಅಕ್ರಮವಾಗಿ ಸರಬರಾಜು ಮಾಡಿಕೊಂಡು ನಗರದಲ್ಲಿ ಡ್ರಗ್ಸ್ ದಂಧೆನಡೆಸುತ್ತಿದ್ದ ಓರ್ವ ನೈಜಿರಿಯಾ ಪ್ರಜೆ ಸೇರಿ 10 ಜನ ಕುಖ್ಯಾತ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಸನ್ನೀ ಓ ಇನೋಶೇಂಟ್(26 ), ಸಾರ್ಥಕ್ ಆರ್ಯ(31 ), ನಿತೀನ್ ( 24), ಕಾರ್ತಿಕ್ ಗೌಡ  ( 25), ಝಮಾನ್ ಹಂಜಾಮಿನಾ (25) ಸೇರಿ ಹತ್ತು ಜನ ಬಂಧಿತ ಆರೋಪಿಗಳು.

ಬಂಧಿತರಿಂದಸುಮಾರು 90 ಲಕ್ಷ ರೂ. ಮೌಲ್ಯದ ಮಾದಕ ವಸ್ತಗಳಾದ 660 ಎಲ್.ಎಸ್.ಡಿ ಪೇಪರ್ ಳನ್ನು 386 ಎಂ.ಡಿ.ಎಂ.ಎ, 180 ಎಕ್ಸ್ ಟೆಸಿ ಮಾತ್ರೆಗಳು, 12 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್, 10 ಗ್ರಾಂ ಕೋಕೇನ್ ಪುಡಿಯನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 12 ಮೊಬೈಲ್ ಪೋನ್, 3 ಲ್ಯಾಪ್ ಟಾಪ್, 2 ದ್ವಿಚಕ್ರ ವಾಹನ,ಪೋಸ್ಟಲ್ ಕವರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.

SCROLL FOR NEXT