ರಾಜ್ಯ

ಅರ್ಕಾವತಿ ಲೇಔಟ್ ಗಾಗಿ ಜಮೀನು ಕಳೆದುಕೊಂಡವರಿಗೆ 450 ಎಕರೆ ಭೂಮಿ ಸಂಗ್ರಹಿಸಲು ಬಿಡಿಎ ಮುಂದು

Shilpa D

ಬೆಂಗಳೂರು: ಬೆಂಗಳೂರು ಉತ್ತರ ಭಾಗದಲ್ಲಿ ಅರ್ಕಾವತಿ ಲೇಔಟ್ ಗಾಗಿ ಭೂಮಿ ನೀಡಿದ ರೈತರಿಗಾಗಿ ಪರಿಹಾರ ರೂಪವಾಗಿ ಭೂಮಿ ನೀಡಲು ಬಿಡಿಎ ಮುಂದಾಗಿದೆ.

ಈ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  ತನ್ನ 64 ಲೇಔಟ್‌ಗಳಲ್ಲಿ ಯಾವುದಾದರೂ ಖಾಲಿ ಇರುವ ಭೂಮಿಯನ್ನು ಹಸ್ತಾಂತರಿಸಲು ಯೋಜಿಸಿದೆ ಅಥವಾ ಅರ್ಕಾವತಿಯಲ್ಲಿ ಇನ್ನೂ 450 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಭೂಮಿ ಕಳೆದುಕೊಂಡವರಿಗೆ ನೀಡಲಿದೆ.

2003-2004ರಲ್ಲಿ ಬಿಡಿಎ 11,000 ಸೈಟ್‌ಗಳೊಂದಿಗೆ ವಿನ್ಯಾಸವನ್ನು ಯೋಜಿಸಿತ್ತು. ಇದಕ್ಕಾಗಿ 1,806 ಎಕರೆ ಭೂಮಿಯಲ್ಲಿ ಲೇಔಟ್ ನಿರ್ಮಿಸಿ, 8,814 ಅರ್ಜಿದಾರರಿಗೆ ನಿವೇಶನ ನೀಡಿತ್ತು. 2004 ರಿಂದ 2014ರವರೆಗೆ ಹೊರಡಿಸಿದ ಸರಣಿ ಡಿನೋಟಿಫಿಕೇಷನ್ ಆದೇಶ 300 ಭೂ ಮಾಲಿಕರು ಮತ್ತು 3,230 ನಿವೇಶನ ಮಾಲಿಕರ ಮೇಲೆ ಪರಿಣಾಮ ಬೀರಿತ್ತು.

ಕೊರೋನಾ ವ್ಯಾಪಕವಾಗಿ ಹರಡುವವರೆಗೆ ಅಂದರೆ ಮಾರ್ಚ್ ವರೆಗೆ ರೈತರು ಬಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು, 64 ಲೇಔಟ್ ನಲ್ಲಿರುವ ನಮ್ಮ ಆಸ್ತಿಗಳ ಲೆಕ್ಕ ಶೋಧನೆಯನ್ನು ಆರಂಭಿಸಿದ್ದೇವೆ,  ಅವುಗಳಲ್ಲಿ ಹೆಚ್ಚಿನವುಗಳನ್ನು ಅಭಿವೃದ್ಧಿ ಪಡಿಸಿ, ಬಿಬಿಎಂಪಿಗೆ ಹಸ್ತಾಂತರಿಸಿದ್ದೇವೆ, ಕೆಲವು ಖಾಲಿಯಿದ್ದು ಇನ್ನೂ ಕೆಲವು ಸಿಎಂ ನಿವೇಶನಗಳು ನಮ್ಮ ಬಳಿಯೇ ಇವೆ,  ನಮಗೆ ಅಗತ್ಯ ಭೂಮಿ ಸಿಕ್ಕರೇ ಅರ್ಕಾವತಿ ಬಡಾವಣೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗಾಗಿ ನೀಡುತ್ತೇವೆ ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರ್ಕಾವತಿ ಬಡಾವಣೆಯಲ್ಲಿಯೇ 450 ಎಕರೆ ಭೂಮಿ ಸ್ವಾದೀನ ಪಡಿಸಿಕೊಳ್ಳಲು ನಾವು ಚಿಂತಿಸುತ್ತಿದ್ದೇವೆ, ಅದು ಸಿಕ್ಕರೆ ಪ್ಲಾನ್ ಬಿ ರೆಡಿಯಾಗಲಿದೆ, ಈ ಪ್ಲಾನ್ ಅಡಿಯಲ್ಲಿ ಜಮೀನು ಕಳೆದುಕೊಂಡವರಿಗೆ ಭೂಮಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಾವು ಬಿಡಿಎ ಬೋರ್ಡ್ ಮೀಟಿಂಗ್ ನಡೆಸಿದ್ದು, ನಾವು ಅವರನ್ನು ಅನೇಕ ಹಳ್ಳಿಗಳಲ್ಲಿ ಗುರುತಿಸಿದ್ದೇವೆ ಮತ್ತು ಪ್ರಾಥಮಿಕ ಅಧಿಸೂಚನೆಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

ಸಮಸ್ಯೆಯನ್ನು ಪರಿಹರಿಸಲು ಈ ಆಯ್ಕೆಗಳು ಮುಂದಾಗಿವೆ ಎಂದು ಇಬ್ಬರು ಉನ್ನತ ಬಿಡಿಎ ಅಧಿಕಾರಿಗಳು ದೃಢಪಡಿಸಿದ್ದಾರೆ.

SCROLL FOR NEXT